ಗುಂಡಿ ತಪ್ಪಿಸಲು ಹೋದಾಗ ಸ್ಕೂಟಿಗೆ ಸರ್ಕಾರಿ ಬಸ್ ಡಿಕ್ಕಿ:  ತಾಯಿ ಸಾವು, ಮಗಳಿಗೆ ಗಾಯ.

Promotion

ಬೆಂಗಳೂರು, ಅಕ್ಟೋಬರ್,17,2022(www.justkannada.in):  ಗುಂಡಿ ತಪ್ಪಿಸಲು ಹೋದ ವೇಳೆ ಸ್ಕೂಟಿಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾಗಿ  ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಗರದ ಸುಜಾತ ಥಿಯೇಟರ್ ಬಳಿ ಈ ಘಟನೆ ನಡೆದಿದೆ. ತಾಯಿ ಉಮಾಗೆ ಗಂಭೀರ ಗಾಯಗಳಾಗಿತ್ತು. ಇಎಸ್ ಐ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.   ಮಗಳು ವನಿತಾಗೆ ಸಣ್ಣಪುಟ್ಟ ಗಾಯಗಳಾಗಿವೆ.

ತಾಯಿ ಮಗಳು ಇಬ್ಬರು ಮೆಜೆಸ್ಟಿಕ್ ನಿಂದ ರಾಜಾಜಿನಗರದತ್ತ ಸ್ಕೂಟಿಯಲ್ಲಿ ತೆರಳುತ್ತಿದ್ದರು.  ಈ ವೇಳೆ ಗುಂಡಿ ತಪ್ಪಿಸಲು ಬೈಕ್ ಅನ್ನ ಸೈಡ್ ಗೆ ಚಲಾಯಿಸಿದ್ದು ಈ ಸಮಯದಲ್ಲಿ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾಗಿದೆ.  ಸರ್ಕಾರಿ ಬಸ್  ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿತ್ತು.  ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Key words: pothole-government bus -collided – scooty-death