ಜೂ,7ರ ಪದಗ್ರಹಣ ಕಾರ್ಯಕ್ರಮ ಮುಂದೂಡಿಕೆ: ಕೇಂದ್ರ, ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಡಿ.ಕೆ ಶಿವಕುಮಾರ್…

postponement-program-kpcc-president-dk-shivakumar-outrage
Promotion

ಬೆಂಗಳೂರು,ಜೂ,1,2020(www.justkannada.in): ಜೂನ್ 7 ರಂದು ನಡೆಯಬೇಕಿದ್ದ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಪದಗ್ರಹಣ ಕಾರ್ಯಕ್ರಮವನ್ನ ಮುಂದೂಡಲಾಗಿದೆ. ಇನ್ನು ಕಾರ್ಯಕ್ರಮಕ್ಕೆ ಹೊಸ ಡೇಟ್ ನೀಡಿವುದಾಗಿ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ ಶಿವಕುಮಾರ್, 7800 ಕಡೆ ಒಂದೇ ಮಾತರಂ ಮೂಲಕ ಪದಗ್ರಹಣ ಗ್ರಾ.ಪಂ,ವಾರ್ಡ್ ಮಟ್ಟದಲ್ಲಿ  ಸಂವಿಧಾನದ ಪ್ರಿಯಾಂಬಲ್ ಓದಿ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಂಚಾಯ್ತಿ,ವಾರ್ಡ್ ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಿದ್ದೇವೆ. ನಾವು ಸರ್ಕಾರ, ಕಮೀಷನರ್ ಒಪ್ಪಿಗೆಯನ್ನೂ ಪಡೆದಿದ್ದೇವೆ. ಆದರೆ ಇದೀಗ ರಾಜಕೀಯ ಕಾರ್ಯಕ್ರಮ ಮಾಡುವಂತಿಲ್ಲ ಎಂದಿದೆ ಕೇಂದ್ರ ರಾಜ್ಯ ಸರ್ಕಾರದ ಮಾರ್ಗಸೂಚಿ ಹೊರಡಿಸಿದೆ. ಜೀನ್ 7 ರಂದು ಕಾರ್ಯಕ್ರಮ ಮಾಡಬೇಡಿ ಎಂದು ತಿಳಿಸಿದ್ದಾರೆ. ಹೀಗಾಗಿ ನಾವು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು ಹಾಳಾಗಿದೆ. ಇದರ ಹಿಂದೆ ರಾಜಕೀಯ ಹುನ್ನಾರವಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಮಾರ್ಚ್ 11 ರಂದು ಕೆಪಿಸಿಸಿ ಅಧ್ಯಕ್ಷನಾಗಿ ನೇಮಕವಾಗಿದ್ದೇನೆ. ಅಂದಿನಿಂದಲೇ ನಾನು ಕೆಲಸ ಪ್ರಾರಂಭಿಸಿದ್ದೇನೆ. ಕೋವಿಡ್ ನಿಂದ ರಾಜಕೀಯ ಕಾರ್ಯಕ್ರಮ ಮಾಡುವಂತಿಲ್ಲ. ಆದರೂ ನಮ್ಮ ಕಾರ್ಯಕರ್ತರು ಉತ್ತಮ ಕೆಲಸ ಮಾಡಿದ್ದಾರೆ. ಪ್ರತಿಪಕ್ಷವಾಗಿ ನಾವು ಸಮಸ್ಯೆಗೆ ಧ್ವನಿಯಾಗಿದ್ದೇವೆ. ಜನರ ಧ್ವನಿಯಾಗಿ ಸರ್ಕಾರಕ್ಕೆ ಸಂದೇಶ ಮುಟ್ಟಿಸಿದ್ದೇವೆ. ಮಾಧ್ಯಮಗಳು ಸರ್ಕಾರದ ಲೋಪದೋಷ ತೋರಿಸಿವೆ. ಸರ್ಕಾರವನ್ನ ಕಣ್ತೆರೆಸುವ ಕೆಲಸ ಮಾಡಿದ್ದೇವೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

ಲೆಕ್ಕಪತ್ರ ಸಮಿತಿ ಪರಿಶೀಲನೆಗೆ ಅವಕಾಶ ತಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪರಿಶೀಲನೆ ಮಾಡೋದು ತಪ್ಪೇನಿದೆ. ಸ್ಪೀಕರ್ ಅವರಿಗೆ ಯಾಕಿಷ್ಟು ಅನುಮಾನ..? ಸಮಿತಿಯನ್ನ ಸ್ಪೀಕರ್ ಅವರೇ ರಚಿಸಿರುತ್ತಾರೆ. ಸರ್ಕಾರಕ್ಕೆ ಸಹಾಯ ಮಾಡೋಕೆ ಸಮಿತಿ ಇರೋದು. ಬೇರೆ ಬೇರೆ ಸಮಿತಿಗಳು ಕೆಲಸ ಮಾಡ್ತಿಲ್ವಾ. ಪ್ರತಿಪಕ್ಷ ನಾಯಕರು ಎಲ್ಲರ ಸಭೆ ನಡೆಸಬಹುದು. ಸಿಎಸ್ ಇಂದ ಹಿಡಿದು ಎಲ್ಲ ಅಧಿಕಾರಿಗಳಿಂದ ಮಾಹಿತಿ ಪಡೆಯಬಹುದು. ಅದೇ ರೀತಿ ಲೆಕ್ಕ ಪತ್ರ ಸಮಿತಿಯೂ ಪಡೆಯಲು ಅವಕಾಶವಿದೆ ಎಂದು

ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ ಮಂಡನೆ ವಿಚಾರ ಕುರಿತು ಮಾತನಾಡಿದ ಡಿಕೆಶಿ, . ಅದರ ಬಗ್ಗೆ ನಾವು ಪಕ್ಷದಡಿ ಚರ್ಚಿಸುತ್ತೇವೆ. ನಂತರ ಸದನದಲ್ಲಿ ಚರ್ಚೆಗೆ ಬರುತ್ತೆ ಎಂದರು.

Key words: Postponement -program –KPCC president-DK Shivakumar – outrage