ಮಾಜಿ ಸಂಸದೆ ರಮ್ಯಾ ಬಗ್ಗೆ ಅಶ್ಲೀಲವಾಗಿ ಪೋಸ್ಟ್ ಹಾಕಿದ್ದ ವ್ಯಕ್ತಿ ವಿರುದ್ದ ಕೇಸ್ ದಾಖಲು…

Promotion

ಬೆಂಗಳೂರು,ಮೇ,7,2019(www.justkannada.in): ನಟಿ ಹಾಗೂ ರಾಜಕಾರಣಿ ರಮ್ಯಾ ವಿರುದ್ಧ ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ವ್ಯಕ್ತಿ ವಿರುದ್ದ ಪ್ರಕರಣ ದಾಖಲಾಗಿದೆ.

ರಮ್ಯಾ ಪರ ವಕೀಲೆ ಎಚ್‌.ವಿ ಭವ್ಯ ಅನು ಎಂಬುವರು ನೀಡಿದ ದೂರಿನ ಮೇರೆಗೆ ನವೀನ್‌ ಸಾಗರ್‌ ಎಂಬಾತನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.  ಮಾಜಿ ಸಂಸದೆಯೂ ಆಗಿರುವ ನಟಿ ರಮ್ಯಾ ಅವರ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಆರೋಪಿ ನವೀನ್ ಸಾಗರ್ ಪೋಸ್ಟ್‌ ಮಾಡಿದ್ದ.

ರಮ್ಯಾ ಅವರ ಅಭಿನಯಿಸಿದ್ದ ಚಿತ್ರವೊಂದರ ಫೋಟೋವನ್ನು ವಿಕೃತವಾಗಿ ಬಿಂಬಿಸಿ, ಅಶ್ಲೀಲ ಪದ ಬಳಸಿ ನವೀನ್‌ ಸಾಗರ್‌ ಪೋಸ್ಟ್‌ ಮಾಡಿದ್ದ. ಈ  ಮೂಲಕ ರಮ್ಯಾ ಅವರ ಘನತೆಗೆ ಧಕ್ಕೆ ತರುವ ರೀತಿ ನಡೆದುಕೊಂಡಿರುವುದಾಗಿ ಆರೋಪಿ ವಿರುದ್ಧ ಬೆಂಗಳೂರಿನ ಸೈಬರ್ ಕ್ರೈಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪದಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Key words: posted- abusively- Former MP -Ramya – case -against – person