ಮೈಸೂರು ನಗರದಲ್ಲಿ ವಾಲ್ಮೀಕಿ ಪ್ರತಿಮೆ ನಿರ್ಮಾಣ ಆಗ್ರಹಿಸಿ ಅಂಚೆ ಪತ್ರ ಚಳುವಳಿ….

ಮೈಸೂರು,ನವೆಂಬರ್,30,2020(www.justkannada.in):  ನಗರದ ನಜರ್ ಬಾದ್ ನಲ್ಲಿರುವ ಮಿನಿ ವಿಧಾನಸೌಧದ (ತಾಲ್ಲೂಕು ಕಛೇರಿ) ಮುಂಭಾಗದ ಉದ್ಯಾನವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಆಗ್ರಹಿಸಿ ಮೈಸೂರು ನಾಯಕರ ಪಡೆ ವತಿಯಿಂದ ನಗರಪಾಲಿಕೆ ಮುಂಬಾಗದಲ್ಲಿರುವ ಅಂಚೆ ಪೆಟ್ಟಿಗೆಯ ಬಳಿ ಪೋಸ್ಟ್ ಕಾರ್ಡ್ ಚಳುವಳಿ ನಡೆಸಲಾಯಿತು.logo-justkannada-mysore

ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಕಳೆದೊಂದು ದಶಕದ ಬೇಡಿಕೆಯಾದ ವಾಲ್ಮೀಕಿ ಪ್ರತಿಮೆ ನಿರ್ಮಿಸಲು ಬೇಡಿಕೆಯನ್ನು ನಾಯಕ ಸಮುದಾಯ ಹೊಂದಿದೆ.  ಅದಕ್ಕೆ ಸ್ಪಂದಿಸಿ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ಸಂಸದರು ಭರವಸೆಯನ್ನು ಕೊಟ್ಟಿದ್ದಾರೆ  ಅದರಂತೆಯೇ ನಗರಪಾಲಿಕೆ ಕೌನ್ಸಿಲ್ ಸಭೆಯಲ್ಲಿ ವಾಲ್ಮೀಕಿ ಪ್ರತಿಮೆಯನ್ನು ಪ್ರತಿಷ್ಟಾನೆಗೆ ನಿರ್ಣಿಯಿಸಿದ್ದು ಸಂಬಂಧಿಸಿದಂತೆ ಪ್ರಾಧಿಕಾರದವರು ನಿರ್ಲಕ್ಷ್ಯ ತೋರಿದ್ದಾರೆ.

ಶ್ರೀರಾಮನ ಹೆಸರೇಳಿ ಅಧಿಕಾರಕ್ಕೆ ಬಂದಿರುವ ರಾಜ್ಯಸರ್ಕಾರದವರು ಜಗತ್ತಿಗೆ ಶ್ರೀರಾಮನನ್ನು ಪರಿಚಯಿಸಿದ ಶ್ರೀ ಮಹರ್ಷಿ ವಾಲ್ಮೀಕಿ ರವರ ಬಗ್ಗೆ ನಿರ್ಲಕ್ಷ ಯಾಕೆ ? ಎಂದು ಪ್ರಶ್ನಿಸಿರುವ ನಾಯಕಪಡೆ ಸದಸ್ಯರು, ನಗರದ ಮಿನಿ ವಿಧಾನಸೌಧದ (ತಾಲ್ಲೂಕು ಕಛೇರಿ) ಮುಂಬಾಗದ ಉದ್ಯಾನವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಅಂಚೆ ಪತ್ರ ಹಾಕುವ ಮೂಲಕ ಪ್ರತಿಭಟನೆ  ನಡೆಸಿದರು.post-letter-movement-mysore-demanding-construction-valmiki-statue

ನಾಯಕರ ಪಡೆ ಅದ್ಯಕ್ಷರಾದ ವಕೀಲ ಪಡುವಾರಹಳ್ಳಿ ಎಂ ರಾಮಕೃಷ್ಣ ರಾಜು ಮಾರ್ಕೆಟ್, ಶ್ರೀದರ ಬೆಟ್ಟ,ಗೋವಿಂದರಾಜು, ತಿಮ್ಮನಾಯಕ,ರಮನಹಳ್ಳಿ ಶಿವಣ್ಣ,ಅಜಯ್,ಕ್ಯಾತಮಾರನಹಳ್ಳಿ ಯೋಗೇಶ್,ನವೀನ್,ಸಂತೋಷ ಮತ್ತಿತರಿದ್ದರು.

Key words: post Letter- Movement-mysore- demanding -construction -Valmiki Statue.