ಸಿಎಂ ಹುದ್ಧೆ ಖಾಲಿ ಇಲ್ಲ: ಡಿಕೆಶಿ, ಸಿದ್ಧರಾಮಯ್ಯ ಆಸೆ ಈಡೇರುವುದಿಲ್ಲ- ಸಚಿವ ಸುಧಾಕರ್ ಟಾಂಗ್.

Promotion

ಚಿಕ್ಕಬಳ್ಳಾಪುರ,ಏಪ್ರಿಲ್,4,2023(www.justkannada.in): ಸಿಎಂ ಹುದ್ದೆಗಾಗಿ ಸಿದ್ಧರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ  ಸ್ಪರ್ಧೆ ಹಿನ್ನೆಲೆ ಈ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವ್ಯಂಗ್ಯವಾಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಇಂದು ಮಾತನಾಡಿದ ಸಚಿವ ಸುಧಾಕರ್, ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿಯಿಲ್ಲ ಸಿದ್ಧರಾಮಯ್ಯ,  ಡಿ.ಕೆ  ಶಿವಕುಮಾರ್ ಆಸೆ ಈಡೇರುವುದಿಲ್ಲ. ಒಂದೇ ಕುರ್ಚಿಗೆ ಇಬ್ಬರು ಟವೆಲ್ ಹಾಕುತ್ತಿದ್ದಾರೆ . ಆದರೆ ಅವರ ಆಸೆ ಈಡೇರುವುದಿಲ್ಲ ಕಾಂಗ್ರೆಸ್ ನಲ್ಲಿ ಯಾವ ರೀತಿ ಒಪ್ಪಂದ ಮಾಡಿಕೊಂಡಿದ್ದಾರೋ ಗೊತ್ತಿಲ್ಲ ಎಂದರು.

ಡಿಕೆ ಶಿವಕುಮಾರ್  ಸಿಎಂ ಆಗಲು ಹೈಕಮಾಂಡ್ ಒಪ್ಪಲ್ಲ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ. ಸಿದ‍್ಧರಾಮಯ್ಯ ಹೇಳಿಕೆ ಗಮನಿಸಿದರೇ ಕಾಂಗ್ರೆಸ್ ನಲ್ಲಿ ಸಮನ್ವಯತೆ ಇಲ್ಲವೆಂದು ಗೊತ್ತಾಗುತ್ತದೆ ಎಂದು ಟೀಕಿಸಿದರು.

Key words: post – CM –Siddaramaiah-DK shivakumar- Minister- Sudhakar