ಐಪಿಎಲ್ ಫೈನಲ್ ಪಂದ್ಯದ ದಿನಾಂಕ ಬದಲು ಸಾಧ್ಯತೆ

Promotion

ಮುಂಬೈ, ಜುಲೈ 31, 2020 (www.justkannada.in): ಸೆಪ್ಟೆಂಬರ್​ 19ರಿಂದ ಐಪಿಎಲ್​ ನಡೆಯಲಿದೆ, ಆದರೆ ಐಪಿಎಲ್​ ಫೈನಲ್​ ಪಂದ್ಯದ ದಿನ ಇನ್ನೂ ನಿಗದಿಯಾಗಿಲ್ಲ.

ಐಪಿಎಲ್​ ಫೈನಲ್​ ನವೆಂಬರ್​ 8 ರಂದು ನಡೆಯುತ್ತೆ ಎಂದು ಹೇಳಲಾಗಿತ್ತು. ಆದ್ರೀಗ, ಪೈನಲ್​ ಪಂದ್ಯವನ್ನ ನವೆಂಬರ್​ 10 ಕ್ಕೆ ಮುಂದೂಡಲು ಬಿಸಿಸಿಐ ತೀರ್ಮಾನಿಸಿದೆ.

ಮುಂದಿನ ಮೂರು ದಿನಗಳಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಹೊರ ಬೀಳುವ ಸಾಧ್ಯತೆ ಇದೆ. ಇದು ಖಚಿತವಾದರೆ ಟೀಂ ಇಂಡಿಯಾ ಆಟಗಾರರು ಯುಎಇಯಿಂದ ತವರಿಗೆ ಮರಳದೆ ನೇರವಾಗಿ ಆಸ್ಟ್ರೇಲಿಯಾಕ್ಕೆ ಹಾರಲಿದ್ದಾರೆ.

ಆಸಿಸ್ ನಲ್ಲಿ ವಿರಾಟ್​ ಕೊಹ್ಲಿ ಪಡೆ ಮೂರು ಪಂದ್ಯಗಳ ಟಿ-20 ಸರಣಿ, ಟೆಸ್ಟ್ ಹಾಗೂ ಏಕದಿನ ಸರಣಿ ಆಡಲಿದೆ.