ರಾಜ್ಯದಲ್ಲಿ ಮತ್ತೆ ಸಾರಿಗೆ ನೌಕರರ ಮುಷ್ಕರ ಸಾಧ್ಯತೆ.

Promotion

ಬೆಂಗಳೂರು,ಜೂನ್,23,2021(www.justkannada.in):  ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯದಲ್ಲಿ ಮುಷ್ಕರ ನಡೆಸಿದ್ಧ ಸಾರಿಗೆ ನೌಕರರು ಇದೀಗ ಸರ್ಕಾರ ಬೇಡಿಕೆ ಈಡೇರಿಸದ ಆರೋಪದ ಮೇಲೆ ಮತ್ತೆ ಮುಷ್ಕರಕ್ಕೆ ಮುಂದಾಗುವ ಸಾಧ್ಯತೆ ಇದೆ.jk

ಹೌದು, ಈ ಬಗ್ಗೆ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸುಳಿವು ನೀಡಿದ್ದಾರೆ.  ಈ ಕುರಿತು ಮಾತನಾಡಿರುವ ಅವರು, ಕಳೆದ ವರ್ಷ 15 ದಿನಗಳ ಕಾಲ ಮುಷ್ಕರ ನಡೆಸಿದವು. ಆ ವೇಳೆಯಲ್ಲಿ ಲಿಖಿತ ರೂಪದಲ್ಲಿ ಸರ್ಕಾರ ಭರವಸೆ  ನೀಡಿತ್ತು. ಆದರೆ ಆ ಭರವಸೆಯನ್ನ ಸರ್ಕಾರ ಈಡೇರಿಸಿಲ್ಲ.

ಮುಷ್ಕರದಲ್ಲಿ ಭಾಗಿಯಾಗಿದ್ದ ಸಿಬ್ಬಂದಿ ವರ್ಗಾವಣೆ ಮಾಡಲಾಗಿದೆ. ಕೆಲ ನೌಕರರನ್ನ ಅಮಾನತು ಮಾಡಲಾಗಿದೆ. ಹೀಗಾಗಿ  ಅಮಾನತು ಮಾಡಲಾದ ನೌಕರರನ್ನ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು. 6ನೇ ವೇತನ ಜಾರಿಯಾಗಲೇಬೇಕು. ನೌಕರರ ಬಾಕಿ ವೇತನ ಪಾವತಿಯಾಗಬೇಕು. ಬೇಡಿಕೆ ಈಡೇರಿಸದಿದ್ದರೇ ಮತ್ತೆ ಪ್ರತಿಭಟನೆ ನಡೆಸುವುದಾಗಿ ಸರ್ಕಾರಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ಸರ್ಕಾರ ಕೊಟ್ಟಿದ್ದಾರೆ.

ಜುಲೈ 1 ರಂದು ನಡೆಸಯುವ ಸಭೆಯಲ್ಲಿ ಮುಷ್ಕರದ ರೂಪುರೇಷೆ ಬಗ್ಗೆ ಚರ್ಚಿಸಿ ದಿನಾಂಕ ನಿಗದಿ ಮಾಡಲಾಗುವುದು ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ENGLISH SUMMARY…

Transport Dept. employees probably to protest again
Bengaluru, June 23, 2021 (www.justkannada.in): The Transport Department employees who had protested against the State Government demanding to fulfill their various demands a few months ago may start their protest again criticizing the government for not fulfilling all their demands.
Karnataka State Road Transport Corporation Employees Federation Honorary President Kodihalli Chandrashekar has given a clue about the protest. “We had protested for 15 days last year. The State Government had given us written assurance, but has not fulfilled our demands,” he said.
“The staff who had taken part in the protest have been transferred and a few of them have been suspended. Hence, we demand the government to reinstate all the employees who have been suspended and we also demanded that the government should implement the 6th pay commission at any cost. It should also pay the pending salaries to the staff, or else we will protest again,” he has warned.
Further, he informed that a meeting would be held on July 1 and plans will be made to protest and date will be fixed.
Keywords: Kodihalli Chandrashekar/ KSRTC/ staff/ employees protest again/ clue

Key words;  possibility – strike – transport -workers -again –kodihalli chandrashekar