‘ಪಾಪ್ ಕಾರ್ನ್ ಮಂಕಿ ಟೈಗರ್’ ನಲ್ಲಿ  ಸೌತ್ ಇಂಡಿಯಾ ಟಾಪ್ ಹೀರೋಯಿನ್ ಪತಿ..!?: ನಾಯಕ ನವೀನ್ ಈಸ್ ಬ್ಯಾಕ್…

Promotion

ಬೆಂಗಳೂರು,ನ,12,2019(www.justkannada.in): ಪಾಪ್ ಕಾರ್ನ್ ಮಂಕಿ ಟೈಗರ್ ಸ್ಯಾಂಡಲ್ ವುಡ್ ನಲ್ಲಿ ವಿಶೇಷ ಕುತೂಹಲವನ್ನ ಹುಟ್ಟಿಸಿರೋ, ವಿಶೇಷ ನಿರೀಕ್ಷೆಯನ್ನ ಹುಟ್ಟಿಸಿರೋ ಸಿನಿಮಾ. ಸುಕ್ಕಾ ಸೂರಿ- ಡಾಲಿ ಧನಂಜಯ ಕಾಂಬಿನೇಷನ್ ನಿಂದ  ತುಂಬಾ ದೊಡ್ಡ ಮಟ್ಟದ ಭರವಸೆ ಹುಟ್ಟಿಸಿರೋ ಸಿನಿಮಾ. ಟೈಟಲ್ ಹಾಗೂ ಕೆಲ ಪೋಸ್ಟರ್ ಗಳಿಂದ್ಲೇ ಕನ್ನಡ ಸಿನಿಪ್ರಿಯರಲ್ಲಿ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿರೋ ಚಿತ್ರವಿದು. ಇತ್ತೀಚೆಗಷ್ಟೇ ಡಬ್ಬಿಂಗ್ ಕೆಲಸ ಶುರುಮಾಡಿ, ಸದ್ಯ ಅದ್ರಲ್ಲಿ ತಲ್ಲೀನನಾಗಿರೋ ಪಾಪ್ ಕಾರ್ನ್ ಮಂಕಿ ಟೈಗರ್ ಟೀಮ್, ಗ್ಯಾಪ್ ನಲ್ಲೊಂದು ಪೋಸ್ಟರ್ ಬಿಟ್ಟು ಸಿನಿಮಾ ಮೇಲಿನ ಕುತೂಹಲವನ್ನ ಡಬಲ್ ಮಾಡಿದೆ.

ಈ ಪೋಸ್ಟರ್ ನಲ್ಲಿರೋದು ಯಾರು ಗೊತ್ತಾ..?

ಸೂರಿ ಸಿನಿಮಾ ಅಂದ್ರೆ ಅಲ್ಲಿ ಸುಕ್ಕಾ ಅಂದ್ರೆ ರಾ ಕಂಟೆಂಟ್ ಹೆಚ್ಚಿರುತ್ತೆ. ಅದು ಒಂದು ಬಗೆಯ ಕ್ಲಾಸ್ ಆಗಿ ಸಿನಿಪ್ರಿಯರನ್ನ ಸಳೆಯುತ್ತೆ ಅಂತ ವಿಶಿಷ್ಠ ಶೈಲಿಯಲ್ಲಿ ತಮ್ಮದೇ ಶೈಲಿಯಲ್ಲಿ ಸಿನಿಮಾ ಸೆರೆ ಹಿಡಿತಾರೆ ನಿರ್ದೇಶಕ ಸೂರಿ. ಅಷ್ಟೇ ಅಲ್ಲ ಅವ್ರ ಕಥೆ ಮತ್ತು ಪಾತ್ರಗಳು ಮಾತ್ರ ಜನಮಾನಸದಲ್ಲಿ ಎಂದೂ ಉಳಿದುಕೊಳ್ಳುವಂತಹವಾಗಿರುತ್ತೆ. ಅಂತಹ ಇಂಪ್ಯಾಕ್ಟ್ ಅವ್ರ ಸಿನಿಮಾಗಳಿಂದ ಈಗಾಗ್ಲೇ ಸಾಕಷ್ಟು ಆಗಿವೆ. ಅದ್ರಂತೆ, ಇದೀಗ ತೆರೆಗೆ ಬರಲು ಸಿದ್ದವಾಗ್ತಿರೋ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಪಾತ್ರಗಳು ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಅನ್ನಿಸ್ತಿವೆ. ಈವರೆಗೂ ಯಾವುದೇ ದೃಶ್ಯಾವಳಿಗಳನ್ನ ಬಿಟ್ಟುಕೊಡದ ಸೂರಿ, ಜಸ್ಟ್ ಪೋಸ್ಟರ್ ಗಳನ್ನಷ್ಟೇ ರಿಲೀಸ್ ಮಾಡಿದ್ದು ಪ್ರತಿ ಪೋಸ್ಟರ್ ಕೂಡ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಅದ್ರಂತೆ, ಈಗ ರಿಲೀಸ್ ಮಾಡಿರೋ ಈ ಪೋಸ್ಟರ್ ಸಖತ್ ಸ್ಪೆಷಲ್ ಆಗಿದೆ. ಇದೊಂದು ಪೋಸ್ಟರ್ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೇಲೆ ಹಲವು ಪ್ರಶ್ನೆಗಳನ್ನ ಹುಟ್ಟಿಸಿದೆ. ಜೊತೆಗೆ ಒಂದು ಸರ್ಪೈಸ್ ನ ಕೊಡ ಕೊಟ್ಟಿದೆ.

ಜಾಕಿ ಭಾವನ ಪತಿ, ನಾಯಕ ನವೀನ್ ಈಸ್ ಬ್ಯಾಕ್ : PMTನಲ್ಲಿ ಸೂರಿ ನವೀನ್ ಗೆ ಕೊಟ್ಟಿರೋ ಪಾತ್ರವೇನು..?

ಹೌದು, ಪಿಎಂಟಿ ಚಿತ್ರದ ಹೊಸ ಪೋಸ್ಚರ್ ನಲ್ಲಿ ಕಾಕ್ರೋಚ್ ಜೊತೆಗೆ ಕೂತಿರೋದು ನಟಿ ಜಾಕಿ ಭಾವನಾ ಅವರ ಪತಿ ನವೀನ್. ಈ ಚಿತ್ರದಲ್ಲಿ ನವೀನ್  ಒಂದು ಮುಖ್ಯ ಪಾತ್ರವನ್ನ ನಿರ್ವಹಿಸಿದ್ದಾರೆ. ಆದ್ರೆ ಅದು ಪಾಸಿಟೀವಾ ನೆಗೆಟೀವಾ ಅನ್ನೋದು ಗೊತ್ತಿಲ್ಲ. ಟಗರು ಖ್ಯಾತಿಯ ಕಾಕ್ರೋಚ್ ಜೊತೆಗೆ ಕೂದಲು ಬಿಟ್ಟುಕೊಂಡು ಬನಿಯನ್ ನಲ್ಲಿ ಕೂತಿರೋದು ಮಾತ್ರ ನವೀನ್ ಅನ್ನೋದು ಪಕ್ಕಾ ಆಗಿದೆ. ನವೀನ್ ಮೇಕ್ ಒವರ್ ನೋಡಿದ್ರೆ, ಈ ಸಲ ಉದ್ಯಮದಲ್ಲಿ ನಟನಾಗಿ ಪಕ್ಕಾ ನೆಲೆ ನಿಲ್ಲೋ ಹಾಗೇ ಕಾಣ್ತಿದ್ದು, ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ದಿನೇ ದಿನೇ ಉದ್ಯಮದ ಜೊತೆಗೆ ಮಾಸ್ ಸಿನಿಪ್ರಿಯರಲ್ಲಿ ಕ್ರೇಜ್ ನ ಹೆಚ್ಚಿಸ್ತಿದೆ.

ದುನಿಯಾ ಸೂರಿ ಕಥೆ ಚಿತ್ರಕಥೆ ಸಂಭಾಷಣೆ, ನಿರ್ದೇಶನ ಇರೋ ಈ ಚಿತ್ರವನ್ನ ಸುಧೀರ್ ಕೆ.ಎಂ ನಿರ್ಮಿಸ್ತಿದ್ದಾರೆ. ಶೇಖರ್ ಎಸ್ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ಸಂಯೋಜನೆ ಹಾಗೂ ದೀಪು ಎಸ್. ಕುಮಾರ್ ರ ಸಂಕಲನ ಚಿತ್ರಕ್ಕಿದೆ. ಚಿತ್ರದಲ್ಲಿ ಡಾಲಿ ಧನಂಜಯ, ನಿವೇದಿತಾ,ಕಾಕ್ರೋಚ್, ನವೀನ್, ಅಮೃತ ಅಯ್ಯಂಗಾರ್, ಸಪ್ತಮಿ, ಮೋನಿಶಾ ನಾಡಿಗೇರ್ ಹಾಗೂ ಗೌತಮ್ ಚಿತ್ರದಲ್ಲಿ ಪ್ರಮುಖಪಾತ್ರಗಳಲ್ಲಿ ಮಿಂಚಿದ್ದಾರೆ. ಸದ್ಯ ಡಬ್ಬಿಂಗ್ ಕೆಲಸದಲ್ಲಿ ತೊಡಗಿಸಿಕೊಂಡಿರೋ ಚಿತ್ರತಂಡ ಸದ್ಯದಲ್ಲೇ ಚಿತ್ರದ ಮತ್ತಷ್ಟು ಅಪ್ಡೇಟ್ಸ್ ಕೊಡಲಿದೆಯಂತೆ.

Key words: Pop Corn Monkey Tiger-hero- Naveen – back- South India’s -Top Heroine- Husband