ಒಡಿಶಾ ಪುರಿ ಕರಾವಳಿಗೆ ಅಪ್ಪಳಿಸಿದ ಫೋನಿ ಚಂಡಮಾರುತ; ಬಿರುಗಾಳಿ ಸಹಿತ ಧಾರಾಕಾರ ಮಳೆ…

Promotion

ಒಡಿಶಾ,ಮೇ,3,2019(www.justkannada.in):   ಫೋನಿ ಚಂಡಮಾರುತದ ಅಬ್ಬರ ಜೋರಾಗಿದ್ದು ಇದೀಗ ಒಡಿಶಾದ ಪುರಿ ಕರಾವಳಿಗೆ ಪೋನಿ ಚಂಡಮಾರುತ ಅಪ್ಪಳಿಸಿದೆ. ಹೀಗಾಗಿ ಒಡಿಶಾದಲ್ಲಿ ಬಿರುಗಾಳಿ ಸಹಿತ ಬಾರಿ ಮಳೆಯಾಗುತ್ತಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಎದ್ದಿರುವ ಫ್ಯಾನಿ ಚಂಡಮಾರುತ ಇಂದು ಒಡಿಶಾಕ್ಕೆ ಪದಾರ್ಪಣೆ ಮಾಡಿದ್ದು, ಸುಮಾರು 180 ರಿಂದ 200 ಕಿಮೀಗಳ ವೇಗದಲ್ಲಿ ಅಪ್ಪಳಿಸಿದೆ. ಪೋನಿ ಸೈಕ್ಲೋನ್ ಅಪ್ಪಳಿಸಿದ ಹಿನ್ನೆಲೆ ಒಡಿಶಾದ ಹಲವು ಭಾಗಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿದೆ.

ಮುಂಜಾಗ್ರತಾ ಕ್ರಮವಾಗಿ  ಸುಮಾರು 11 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ್ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಜನರು ಮನೆಯಿಂದ ಹೊರಗೆ ಬಾರದಂತೆ ಸೂಚನೆ ನೀಡಲಾಗಿದೆ. ಒಡಿಶಾದ ಕರಾವಳಿಯಲ್ಲಿ ಸುಮಾರು 4 ಸಾವಿರ ಸಿಬ್ಬಂದಿ ನಿಯೋಜಿಸಲಾಗಿದ್ದು, 54 ಎನ್ ಡಿಆರ್ ಎಫ್ ತಂಡಗಳು, 8 ಕೋಸ್ಟ್ ಗಾರ್ಡ್ ನಾಲ್ಕು ಚಿತಾ ಹೆಲಿಕಾಪ್ಟರ್ ಗಳು  2 ಹಡಗು ಸನ್ನದ್ಧ ಸ್ಥಿತಿಯಲ್ಲಿವೆ. ಇನ್ನು ಒಡಿಶಾದಲ್ಲಿ ಮೇ 15ರವರೆಗೆ ಶಾಲಾಕಾಲೇಜುಗಳಿಗೆ ರಜೆ ನೀಡಲಾಗಿದೆ.

ಫೋನಿ ಅಬ್ಬರದಿಂದಾಗಿ ಆಂಧ್ರಪ್ರದೇಶ, ತಮಿಳುನಾಡುಗಳಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಆದರೆ ಪೋನಿ ಚಂಡಮಾರುತದ ಎಫೆಕ್ಟ್ ಕರ್ನಾಟಕಕ್ಕೆ ತಟ್ಟುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

Key words: Pony – Cyclone-hit -Odisha -Puri –coast-rain – storm.