ಇಂದು ರಾಜಕೀಯದಲ್ಲಿ ನೈತಿಕತೆ ಉಳಿದುಕೊಂಡಿಲ್ಲ-ಮಹರಾಷ್ಟ್ರದಲ್ಲಿ ಎನ್ ಸಿಪಿ-ಬಿಜೆಪಿ ಸರ್ಕಾರ ರಚನೆ ಕುರಿತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಬೇಸರ…

Promotion

ಬೆಂಗಳೂರು,ನ,23,2019(www.justkannada.in):  ಮಹಾರಾಷ್ಟ್ರದಲ್ಲಿ ಬಿಜೆಪಿ –ಎನ್ ಸಿಪಿ ಸರ್ಕಾರ ರಚನೆಯ ಅಚ್ಚರಿ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಇಂದಯ ರಾಜಕೀಯದ ನೈತಿಕತೆ ಉಳಿದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಇಷ್ಟು ದಿನ ಎನ್ ಸಿಪಿ- ಶಿವಸೇನೆ ಎನ್ನುತ್ತಿದ್ದರು. ಈಗ ಬಿಜೆಪಿ – ಎನ್ ಸಿಪಿ ಸರ್ಕಾರ ರಚಿಸಿದ್ದಾರೆ. ದೇವರೇ ಕಾಪಾಡಬೇಕು ಎಂದು ಹೇಳಿದರು.

ಹಾಗೆಯೇ ಶರದ್ ಪವಾರ್ ಬಿಜೆಪಿ ವಿರುದ್ದ ಹೋರಾಡಿದವರು. ಈಗ ನನ್ನನ್ನು ಸೇರಿದಂತೆ ರಾಜಕೀಯದಲ್ಲಿ ಯಾವ ನೈತಿಕತೆಯೂ ಉಳಿದುಕೊಂಡಿಲ್ಲ. ಸಿದ್ದಾಂತಗಳಿಗೆ ಈಗ ಬೆಲೆ ಇಲ್ಲದಂತಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

Key words: Political morality -Former CM HD Kumaraswamy – about- formation – NCP-BJP- government -Maharashtra.