ರಾಜಕೀಯ ಉದ್ಧೇಶ ಇಟ್ಟುಕೊಂಡು ಮಾತನಾಡುವುದು ಸರಿಯಲ್ಲ- ಸಿದ್ಧರಾಮಯ್ಯಗೆ ಸಿಎಂ ಬೊಮ್ಮಾಯಿ ತಿರುಗೇಟು.

Promotion

ಬೆಂಗಳೂರು,ಜೂನ್,21,2022(www.justkannada.in): ಕೋವಿಡ್ ಸಮಯದಲ್ಲಿ ಆಕ್ಸಿಜನ್ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ ಈಗ ಯೋಗ ಮಾಡಲು ಬಂದಿದ್ಧಾರೆ ಎಂದು ಟೀಕಿಸಿದ್ಧ ಮಾಜಿ ಸಿಎಂ ಸಿದ್ಧರಾಮಯ್ಯಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ, ಕೋವಿಡ್ ವೇಳೆ ಪ್ರಧಾನಿ ಮೋದಿ ಉತ್ತಮ ಕೆಲಸ ಮಾಡಿದ್ದಾರೆ. ಕೋವಿಡ್ ವೇಳೆ ಕರ್ನಾಟಕಕ್ಕೆ  ಸಾವಿರಾರು ರೂ. ಕೊಟ್ಟಿದ್ದಾರೆ. ಮೋದಿ ಕಾರ್ಯವನ್ನ ಇಡೀ ವಿಶ್ವವೇ ಮೆಚ್ಚಿಕೊಂಡಿದೆ ರಾಜ್ಯಕ್ಕೆ ಔಷಧ ಲಸಿಕೆ ಎಲ್ಲವನ್ನೂ ಕೊಟ್ಟಿದ್ದಾರೆ. ಆದರೆ ಸಿದ‍್ಧರಾಮಯ್ಯ  ರಾಜಕೀಯ ಉದ್ದೇಶ ಇಟ್ಟುಕೊಂಡು ಮಾತನಾಡೋದು ಸರಿಯಲ್ಲ ಎಂದು ಕಿಡಿಕಾರಿದರು.border-districts-state-covid-negative-test-outside-states-minister-basavaraja-bommai

ಪಠ್ಯಪುಸ್ತಕ ಕುರಿತು ಹೆಚ್.ಡಿ ದೇವೇಗೌಡರು ಪತ್ರ ಬರೆದಿದ್ದಾರೆ. ಹೆಚ್.ಡಿ ದೇವೇಗೌಡರ ಪತ್ರದ ಬಗ್ಗೆ ನಾಳೆ ಶಿಕ್ಷಣ ಸಚಿವರ ಜತೆ ಚರ್ಚೆ ಮಾಡ್ತೇನೆ. ದೇವೇಗೌಡರ ಸಲಹೆ ಸೂಚನೆ ಪರಿಶೀಲಿಸುವಂತೆ ಸೂಚಿಸುವೆ. ಹೆಚ್.ಡಿ ದೇವೇಗೌಡರಿಗೆ ಗೌರವಪೂರ್ವಕವಾಗಿ ಉತ್ತರಿಸುವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: political intent-former CM-Siddaramaiah-CM Bommai