ಪ್ರೊ. ಕೆ.ಎಸ್ ಭಗವಾನ್ ನಿವಾಸದ ಮುಂದೆ ಪೊಲೀಸ್ ಬಂದೋಬಸ್ತ್: ಮನೆಯಿಂದ ಹೊರ ಬರದಂತೆ ಮನವಿ …..

Promotion

ಮೈಸೂರು,ಸೆ,27,2019(www.justkannada.in):  ಒಂದೆಡೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ ನಡೆಸುತ್ತಿದ್ದರೇ ಇನ್ನೊಂದೆಡೆ ಮಹಿಷ ದಸರಾ ಆಚರಣೆಗೆ ಪ್ರಗತಿಪರ ಸಂಘಟನೆಗಳು ಮುಂದಾಗಿದ್ದು ಇದಕ್ಕೆ ವಿರೋಧ ವ್ಯಕ್ತವಾಗಿದೆ.

ಮಹಿಷಾ ದಸರಾ ಆಚರಣೆಗೆ ಇಂದು ಮೈಸೂರು ಚಾಮುಂಡಿ ಬೆಟ್ಟದ ಮಹಿಷಾಸುರನ ಪ್ರತಿಮೆ ಬಳಿ ಹಾಕಲಾಗಿದ್ದ ವೇದಿಕೆಯನ್ನ ಸಂಸದ ಪ್ರತಾಪ್ ಸಿಂಹ ತೆರವುಗೊಳಿಸಿದ್ದಾರೆ. ಅಲ್ಲದೆ ಮಹಿಷ ದಸರಾ ಆಚರಣೆಗೆ ಮುಂದಾದ ಹಿನ್ನೆಲೆ ನಗರದ ಚಾಮುಂಡಿಬೆಟ್ಟ ಟೌನ್ ಹಾಲ್ ಮುಂಭಾಗದ ರಸ್ತೆ ಸುತ್ತಮುತ್ತಲಿನ ಪ್ರದೇಶದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಈ ನಡುವೆ ಮಹಿಷ ದಸರಾ ಕುರಿತು ಧ್ವನಿ ಎತ್ತಿದ್ದ ಪ್ರಗತಿ ಪರ ಚಿಂತಕ ಕೆ ಎಸ್ ಭಗವಾನ್  ಮನೆಮುಂದೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕುವೇಂಪುನಗರ ಉದಯರವಿ ರಸ್ತೆಯಲ್ಲಿರುವ ಭಗವಾನ್ ನಿವಾಸದಲ್ಲಿ ಪೊಲೀಸ್ ಸೆಕ್ಯೂರಿಟಿ ನಿಯೋಜಿಸಲಾಗಿದೆ.

ಹಾಗೆಯೇ ಮನೆಯಿಂದ ಹೊರ ಬರದಂತೆ ಕೆ ಎಸ್ ಭಗವಾನ್ ಗೆ  ಪೊಲೀಸರು ಮನವಿ ಮಾಡಿದ್ದಾರೆ.  ಮನೆಯಿಂದ ಹೊರ ಬರದಂತೆ ಕೆ.ಎಸ್ ಭಗವಾನ್ ಗೆ ಪೊಲೀಸರು  ದಿಗ್ಬಂಧನ ವಿಧಿಸಿದ್ದು,  ವಿಷಯ ತಿಳಿದ ಪ್ರೊ.ಮಹೇಶ್ ಚಂದ್ರಗುರು ಭಗವಾನ್ ಮನೆಯತ್ತ ತೆರಳಿದ್ದಾರೆ.

Key words: police-security-  mysore- KS Bhagwan- residence