ಪೊಲೀಸ್ ಠಾಣೆ ಬಳಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪೇದೆ ಮತ್ತು ಪೇದೆಯ ಪತ್ನಿ….

Promotion

ಮೈಸೂರು,ಅ,11,2019(www.justkannada.in): ಕೌಟುಂಬಿಕ ಕಲಹ ಹಿನ್ನೆಲೆ ಪೊಲೀಸ್ ಠಾಣೆ ಮೆಟ್ಟೀಲೆರಿದರೂ ನ್ಯಾಯ ಸಿಗದ ಹಿನ್ನೆಲೆ ಪೇದೆ ಮತ್ತು ಪೇದೆಯ ಪತ್ನಿ ಇಬ್ಬರು ಪೊಲೀಸ್ ಠಾಣೆ ಬಳಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಎಚ್.ಡಿ.ಕೋಟೆ ಪೊಲೀಸ್ ಠಾಣೆ ಎದುರು ಈ ಘಟನೆ ನಡೆದಿದೆ. ಚಾಮರಾಜನಗರ ಪೊಲೀಸ್ ಠಾಣೆಯಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿರುವ ಗುಂಡ್ಲುಪೇಟೆ ನಿವಾಸಿ ನಾಗೇಶ್ (31) ಆತನ  ಪತ್ನಿ ಲಾವಣ್ಯ ಆತ್ಮಹತ್ಯೆಗೆ ಯತ್ನಿಸಿರುವುದು. ಕೌಟುಂಬಿಕ ಕಲಹ ಹಿನ್ನೆಲೆ ನ್ಯಾಯಕ್ಕಾಗಿ ನಾಗೇಶ್ ಪೋಲಿಸ್ ಠಾಣೆ ಮೇಟ್ಟಿಲೇರಿದ್ದರು.

ನಿನ್ನೆ ಗುರುವಾರ ಪತ್ನಿ ತವರು ಮನೆ ಎಚ್.ಡಿ.ಕೋಟೆ ತಾಲ್ಲೂಕಿನ ಬುದನೂರು ಗ್ರಾಮದಲ್ಲಿ ನಾಗೇಶ್ ಮೇಲೆ ಹಲ್ಲೆ ನಡೆಸಿದ್ದ ಹಿನ್ನಲೆ ನಾಗೇಶ್ ಠಾಣೆ ದೂರು ನೀಡಿದ್ದರು. ಆದರೆ ಠಾಣೆಯಲ್ಲಿ  ಎಸ್.ಐ. ಮಧ್ವನ್ಯಾಯಕ್  ನ್ಯಾಯ ಒದಗಿಸದೇ ರಾಜಿ ಮಾಡಿ ಕೇಸ್ ಕ್ಲೋಸ್ ಮಾಡಿದ ಕಾರಣ ನೊಂದ ನಾಗೇಶ್ ದಂಪತಿ ನನಗೆ ನ್ಯಾಯ ಸಿಗುತ್ತಿಲ್ಲ ಎಂದು ವಿಷ ಸೇವಿಸಿ  ಪೊಲೀಸ್ ಠಾಣೆಯ ಮುಂದೆಯೇ ಆತ್ಮಹತ್ಯೆ ಗೆ ಯತ್ನಿಸಿದ್ದಾರೆ. ಅಸ್ವಸ್ಥರಾದ ದಂಪತಿಯನ್ನ ಹೆಚ್.ಡಿ ಕೋಟೆಯ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Key words: police-wife –suicide -poisoning -police station-HD Kote