ಮಾಸ್ಕ್ ಧರಿಸಿಲ್ಲ ಎಂದು ಕಾರಿನಲ್ಲಿದ್ದ ಬಿಜೆಪಿ ಶಾಸಕರೊಬ್ಬರಿಗೆ ಫೈನ್ ಹಾಕಿದ ಪೊಲೀಸರು…

Promotion

ಬೆಂಗಳೂರು,ಡಿಸೆಂಬರ್, 24,2020(www.justkannada.in):   ಮಾಸ್ಕ್ ಧರಿಸದ ಹಿನ್ನೆಲೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿಗೆ ಪೊಲೀಸರು ದಂಡ ವಿಧಿಸಿದ್ದಾರೆ.Teachers,solve,problems,Government,bound,Minister,R.Ashok

ಬಾಡಿಗೆ ಕಾರಿನಲ್ಲಿ ಶಾಸಕ ಭವನಕ್ಕೆ ತೆರಳುತ್ತಿದ್ದ ಶಾಸಕ ಎಂ.ಪಿ ಕುಮಾರಸ್ವಾಮಿ ಅವರಿಗೆ ಮಾಸ್ಕ್ ಧರಿಸಿಲ್ಲ ಎಂಬ ಆರೋಪದ ಮೇಲೆ  ಶೇಷಾದ್ರಿಪುರಂ ಬಳಿ ಪೊಲೀಸರು 250 ರೂ. ದಂಡ ವಿಧಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಶಾಸಕ ಎಂ.ಪಿ ಕುಮಾರಸ್ವಾಮಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ದೂರು ನೀಡಿದ್ದಾರೆ.

ಈ ಕುರಿತು ದೂರು ನೀಡಿರುವ ಶಾಸಕ ಎಂ.ಪಿ ಕುಮಾರಸ್ವಾಮಿ, ‘ಇಂದು(ಡಿ.24) ನಾನು ಬಾಡಿಗೆ ಕಾರಿನಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಕಡೆಯಿಂದ ಶಾಸಕ ಭವನಕ್ಕೆ ತೆರಳುತ್ತಿದ್ದೆ. ಆಗ ಶೇಷಾದ್ರಿಪುರಂ ಪೊಲೀಸ್​ ಠಾಣೆ ಮುಂಭಾಗ ಸಂಚಾರಿ ವ್ಯತ್ಯಯದಿಂದ ಕಾರು ನಿಲುಗಡೆಯಾಗಿತ್ತು. ಆ ವೇಳೆ ಕಾರಿನ ಟಿಂಟ್​ ಗ್ಲಾಸ್​ ಇಳಿಸುವಂತೆ ಬಲವಂತವಾಗಿ ಒತ್ತಡ ಹೇರಿ ಕಾರಿನೊಳಗೆ ಇದ್ದ ನನಗೆ ಮಾಸ್ಕ್​ ಹಾಕಿದ್ದರೂ 250 ರೂಪಾಯಿ ದಂಡ ವಿಧಿಸಿದ್ದಾರೆ. ಪೊಲೀಸರ ಈ ವರ್ತನೆಯಿಂದ ಮುಜುಗರಕ್ಕೊಳಗಾದ ನಾನು ಜವಾಬ್ದಾರಿಯುತ ವ್ಯಕ್ತಿಯಾಗಿ ಅವರಿಗೆ ಮರು ಮಾತನಾಡದೆ ದಂಡ ಕಟ್ಟಿದೆ. ವಿನಾ ಕಾರಣ ನನ್ನ ಮೇಲೆ ದಂಡ ವಿಧಿಸಿರುವ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಶಾಸಕರು ವಿವರಿಸಿದ್ದಾರೆ.police-fine-mla-mp-kumaraswamy-not-mask

ಈ ವಿವರವುಳ್ಳ ದೂರಿನ ಪತ್ರವನ್ನು ಗೃಹ ಸಚಿವರಿಗೆ ಕಳಿಸಿರುವ ಶಾಸಕರು, ಮಾಸ್ಕ್​ ಧರಿಸದ್ದರೂ ಪೊಲೀಸರು ದಂಡ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Key words: police –fine-MLA-MP kumaraswamy- not-mask,