ಕಾಂಗ್ರೆಸ್ ಎಂಎಲ್ ಸಿ ಪುತ್ರ ಸೇರಿ ಮೂವರು ಅರೆಸ್ಟ್…

Promotion

ಬೆಂಗಳೂರು,ಡಿಸೆಂಬರ್,7,2020(www.justkannada.in): ಪೊಲೀಸರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಎಂಎಲ್‌ ಸಿ ನಸೀರ್‌ ಅಹ್ಮದ್‌‌ ಅವರ ಪುತ್ರ ಫಯಾಜ್  ಸೇರಿ ಮೂವರನ್ನ ಅಮೃತಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಎಂಎಲ್‌ ಸಿ ನಸೀರ್‌ ಅಹ್ಮದ್‌‌ ಅವರ ಪುತ್ರ  ಫಯಾಜ್‌, ಇಮ್ರಾನ್ ಷರೀಫ್, ಜಿನ್ ಷರೀಫ್ ಬಂಧಿತರು.  ಕುಡಿತದ ಅಮಲಿನಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆ ಫಯಾಜ್‌ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ರಾತ್ರಿ ವೇಳೆ  ಹೆಬ್ಬಾಳ ಫ್ಲೈ ಓವರ್‌ ಬಳಿ  ಫಯಾಜ್‌  ಗೆಳೆಯರು ತೆರಳುತ್ತಿದ್ದ ಕಾರನ್ನ  ಪೊಲೀಸರು ತಡೆದಿದ್ದಾರೆ. ಈ ಸಂದರ್ಭ ಪೊಲೀಸರು ಹಾಗೂ ಫಯಾಜ್‌ ಮತ್ತು ಗೆಳೆಯರ ನಡುವೆ ವಾಗ್ವಾದ ನಡೆದಿದೆ. ನಂತರ ಫಯಾಜ್‌ ಹಾಗೂ ಆತನ ಗೆಳೆಯರು ಹೆಡ್‌ ಕಾನ್ಸ್‌ಟೇಬಲ್‌ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.police-assult-three-arrest-son-congress-mlc

ಈ ಸಂಬಂಧ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಕಾಂಗ್ರೆಸ್‌ ಎಂಎಲ್‌ ಸಿ ನಸೀರ್‌ ಅಹ್ಮದ್‌‌ ಅವರ ಪುತ್ರ  ಫಯಾಜ್  ಸೇರಿ ಮೂವರನ್ನ ಅಮೃತಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

Key words: police-assult- Three – Arrest- son -Congress MLC