ಪೋಕ್ಸೋ ಪ್ರಕರಣ:  ಚಿತ್ರದುರ್ಗ ಕಾರಾಗೃಹದಿಂದ ಮುರುಘಾ ಶ್ರೀ ಬಿಡುಗಡೆ.

Promotion

ಚಿತ್ರದುರ್ಗ,ನವೆಂಬರ್,16,2023(www.justkannada.in): ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಸಿಕ್ಕಿರುವ ಹಿನ್ನೆಲೆ ಇಂದು ಮುರುಘಾ ಶ್ರೀ ಬಿಡುಗಡೆಯಾಗಿದ್ದಾರೆ.

ಪೋಕ್ಸೋ ಪ್ರಕರಣದಲ್ಲಿ ಇತ್ತೀಚೆಗೆ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಬಿಡುಗಡೆ ಆದೇಶದ ಪ್ರತಿಯನ್ನ  ವಕೀಲರು ನಿನ್ನೆ ಚಿತ್ರದುರ್ಗ ಕಾರಾಗೃಹಕ್ಕೆ ತಲುಪಿಸಿದ್ದರು. ನಿನ್ನೆ ಸಮಯ ಮೀರಿದ್ದರಿಂದ ಇಂದು ಮುರುಘಾಶ್ರೀ ಬಿಡುಗಡೆ ಮಾಡಲಾಗಿದೆ.

1ನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಷರತ್ತುಬದ್ದ ಜಾಮೀನು ನೀಡಿದ್ದು, ಈ ಪ್ರಕಾರ ಮುರುಘಾಶ್ರೀ ಚಿತ್ರದುರ್ಗ ಪ್ರವೇಶಿಸುವಂತಿಲ್ಲ. ಇಬ್ಬರು ಶ್ಯೂರಿಟಿ ಒದಗಿಸಬೇಕು. ಮತ್ತೆ ಇಂತಹ ಕೃತ್ಯವೆಸಗುವಂತಿಲ್ಲ. ಪಾಸ್ ಪೋರ್ಟ್ ಅನ್ನು ವಶಕ್ಕೆ ನೀಡುವಂತೆ ಷರತ್ತು ವಿಧಿಸಿದೆ. ಇದೀಗ 14 ತಿಂಗಳ ಬಳಿಕ ಮುರುಘಾಶ್ರೀ ಜೈಲಿನಿಂದ ಹೊರಬಂದಿದ್ದಾರೆ.

Key words: POCSO- case- Muruga Shri -released -Chitradurga Jail.