ತುಮಕೂರಿಗೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆ: ಇಂದು ಸಿಎಂ ಬಿಎಸ್ ವೈರಿಂದ ಸ್ಥಳ ಪರಿಶೀಲನೆ…

Promotion

ತುಮಕೂರು,ಡಿ,31,2019(www.justkannada.in): ಜನವರಿ 2 ರಂದು ತುಮಕೂರುಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು  ಭೇಟಿ ನೀಡುವ ಹಿನ್ನೆಲೆ ಇಂದು ಸಿಎಂ ಬಿಎಸ್ ಯಡಿಯೂರಪ್ಪ ತುಮಕೂರಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ.

ಇಂದು ತುಮಕೂರಿಗೆ ಭೇಟಿ ನೀಡುವ ಸಿಎಂ ಬಿಎಸ್ ಯಡಿಯೂರಪ್ಪ ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆವರೆಗೂ ತುಮಕೂರಿನಲ್ಲಿ ಸ್ಥಳ ಪರಿಶೀಲನೆ ನಡೆಸಿ ನಂತರ  ಪೊಲೀಸ್, ಮತ್ತು ಎಲ್ಲಾ ಹಿರಿಯ ಅಧಿಕಾರಿಗಳ ಜೊತೆ ಹಾಗೂ ಜಿಲ್ಲಾ ಮಟ್ಟದ ಅಧಿಕಾಗಳ ಸಭೆ ನೆಡೆಸಲಿದ್ದಾರೆ.

ತುಮಕೂರಿನ ಸಿದ್ದಗಂಗಾ ಮಠ,  ಹೆಲಿಪ್ಯಾಡ್,  ಹೈ ಸ್ಕೂಲ್ ಫೀಲ್ಡ್ ಗೆ  ಸಿಎಂ ಬಿ ಎಸ್ ವೈ ಭೇಟಿ ನೀಡಿ ಪರಿಶೀಲನೆ ನಡಸಲಿದ್ದಾರೆ. ಪ್ರಧಾನಿ ಮೋದಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಹಾಗೆಯೇ ರೈತ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

Key words: PM narendra Modi- visit –Tumkur- Location -verification -CM bs yeddyurappa