ಆಯುಷ್ಮಾನ್ ಆರೋಗ್ಯ ಡಿಜಿಟಲ್ ಯೋಜನೆಗೆ ಪ್ರಧಾನಿ ಮೋದಿ ಚಾಲನೆ.

Promotion

ನವದೆಹಲಿ,ಸೆಪ್ಟಂಬರ್,27,2021(www.justkannada.in):  ಆಗಸ್ಟ್​ 15 ಸ್ವಾತಂತ್ರ್ಯೋತಯ್ಸವದ  ಭಾಷಣದ ವೇಳೆ ಘೋಷಿಸಿದ್ದ ಡಿಜಿಟಲ್​ ಆರೋಗ್ಯ ಮಿಷನ್ ​​ಗೆ  ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.

ಈ ಯೋಜನೆ ಆರೋಗ್ಯ ಕ್ಷೇತ್ರದ ಸುಧಾರಣೆಗೆ ತಂತ್ರಜ್ಞಾನವನ್ನು ಒದಗಿಸುತ್ತದೆ ಮತ್ತು ಆರೋಗ್ಯ ವಲಯದಲ್ಲಿ ಹೊಸ ಹೊಸ ಅನ್ವೇಷಣೆಗೆ ದಾರಿಯಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಡಿಜಿಟಲ್​ ಆರೋಗ್ಯ ಮಿಷನ್​ ಒಂದು ಮಹತ್ವದ ಯೋಜನೆಯಾಗಿದ್ದು, ಇದರಡಿ ಪ್ರತಿ ಭಾರತೀಯನಿಗೂ ಒಂದು ಆರೋಗ್ಯ ಐಡಿ ನೀಡಲಾಗುತ್ತದೆ. ಇದು ಆ ವ್ಯಕ್ತಿಯ ಆರೋಗ್ಯ ಅಕೌಂಟ್​​ನಂತೆಯೂ ಕೆಲಸ ಮಾಡುತ್ತದೆ. ಮೊಬೈಲ್​ ಆಯಪ್​​ನಲ್ಲಿ ಹೆಲ್ತ್ ಅಕೌಂಟ್ ರಚಿಸಿಕೊಂಡು, ಪ್ರತಿಯೊಬ್ಬರೂ ಅದರಲ್ಲಿ ವೈಯಕ್ತಿಕ ಆರೋಗ್ಯ ದಾಖಲೆಗಳನ್ನು ಲಿಂಕ್​ ಮಾಡಿಕೊಳ್ಳಬಹುದು. ನಂತರ ಮೊಬೈಲ್​ ಆಯಪ್​ ಮೂಲಕವೇ ಅದನ್ನು ನೋಡಬಹುದಾಗಿದೆ.

ಇಂದು ಡಿಜಿಟಲ್ ಆರೋಗ್ಯ ಮಿಷನ್​ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಡಿಜಿಟಲ್​ ಆರೋಗ್ಯ ಮಿಷನ್​ನಿಂದ ದೇಶದ ಆರೋಗ್ಯ ಕ್ಷೇತ್ರ ಖಂಡಿತವಾಗಿಯೂ ಸಶಕ್ತಗೊಳ್ಳಲಿದೆ. ಕಳೆದ 7 ವರ್ಷಗಳಿಂದಲೂ ನಮ್ಮ ಸರ್ಕಾರ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವ ಪ್ರಯತ್ನದಲ್ಲಿ ನಿರಂತರವಾಗಿ ತೊಡಗಿಕೊಂಡಿದೆ. ಆ ಪ್ರಯತ್ನದ ಒಂದು ಭಾಗವಾಗಿ ಇಂದು ಅತ್ಯಂತ ಮಹತ್ವದ, ಮುಖ್ಯವಾದ ಹಂತಕ್ಕೆ ಕಾಲಿಡಲಾಗಿದೆ ಎಂದು ಹೇಳಿದರು.

Key words: PM-narendra Modi-launches- Ayushmann health- digital -project