ಪಕ್ಷ ಸಂಘಟನೆಯ ಕುರಿತು ಎಸ್.ಎ ರಾಮದಾಸ್ ಹೊಗಳಿದ ಪ್ರಧಾನಿ ಮೋದಿ.

Promotion

ಮೈಸೂರು,ಏಪ್ರಿಲ್,27,2023(www.justkannada.in)  ಪಕ್ಷ ಸಂಘಟನೆಯಲ್ಲಿ ಕೆ.ಆರ್ ಕ್ಷೇತ್ರ ಮುಂಚೂಣಿಯಲ್ಲಿ ಇರುವ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಲ್ಲೇಖಿಸಿರುವುದು ನನಗೆ ಅತ್ಯಂತ ಸಂತೋಷ ನೀಡಿದೆ ಎಂದು ಶಾಸಕ ಎಸ್.ಎ. ರಾಮದಾಸ್ ತಿಳಿಸಿದರು.

ಪ್ರಧಾನಿ ನರೇಂದ್ರಮೋದಿಯವರ ಜೊತೆ ನಡೆದ ವರ್ಚ್ಯುವಲ್ ಸಂವಾದ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ  ರಾಮದಾಸ್ ಅವರು, ಡಬಲ್ ಇಂಜಿನ್ ಸರ್ಕಾವಿದ್ದರೆ ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕಕ್ಕೆ ಏನೆಲ್ಲಾ ಪ್ರಯೋಜನಗಳು ಆಗಲಿವೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದರು.

ಕೆ.ಆರ್.ಕ್ಷೇತ್ರ ಸಂಘಟನೆಯಲ್ಲಿ ಮೊದಲ ಸ್ಥಾನದಲ್ಲಿರುವುದನ್ನು ಪ್ರಧಾನಿ ಮೋದಿ ಉಲ್ಲೇಖಿಸಿದ್ದು ಸಂತಸ ತಂದಿದೆ. ಕ್ಷೇತ್ರದಲ್ಲಿ ಕಳೆದೊಂದು ವರ್ಷದಿಂದ ಬೂತ್ ಮಟ್ಟದಲ್ಲಿ ಆಲ್ ಓಟ್ಸ್ ಬಿಜೆಪಿ ಓಟ್ಸ್, ಆಲ್ ಬೂತ್ಸ್ ಬಿಜೆಪಿ ಬೂತ್ಸ್ ಎಂಬ ಗುರಿಯೊಂದಿಗೆ ಕೆಲಸ ಮಾಡಿದ್ದೇವೆ ಎಂದರು.

ಕೆ.ಆರ್.ಕ್ಷೇತ್ರದ 265 ಬೂತ್ ಗಳ ಪೈಕಿ 226 ಬೂತ್ ಗಳು ಬಿಜೆಪಿ ಬೂತ್ ಗಳಾಗಿವೆ. ಈ ಹಿಂದೆಯೇ ಹೇಳಿರುವಂತೆ ಈ ಬಾರಿಯ ಚುನಾವಣೆಯಲ್ಲಿ 50 ಸಾವಿರ ಮತಗಳ ಅಂತರದಿಂದ ಕೆ.ಆರ್.ಕ್ಷೇತ್ರವನ್ನು ನಾವು ಗೆಲ್ಲುತ್ತೇವೆ‌ ಎಂದು ಶಾಸಕ ಎಸ್ ಎ ರಾಮದಾಸ್ ವಿಶ್ವಾಸ ವ್ಯಕ್ತಪಡಿಸಿದರು.

Key  words: PM Modi- praised – SA Ramdas – party- organization