ವರ್ಷ ಎಂಟು, ಸುಳ್ಳಿನ ಅವಾಂತರ ನೂರೆಂಟು: ಮೋದಿ ಯಾವುದೇ ಭರವಸೆ ಈಡೇರಿಸಿಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯ ಟೀಕೆ.

ಬೆಂಗಳೂರು,ಜುಲೈ,2,2022(www.justkannada.in): ಪ್ರಧಾನಿ ಮೋದಿ ಅವರು 8 ವರ್ಷದ ಸಾಧನೆ ಬಗ್ಗೆ ಜಾಹೀರಾತು ಕೊಡ್ತಿದ್ದಾರೆ. ಆದರೆ  ಮೋದಿ ಜನರಿಗೆ ನೀಡಿದ್ದ ಯಾವುದೇ ಭರವಸೆಗಳನ್ನ ಈಡೇರಿಸಿಲ್ಲ. ಯಾವ ಕಾರಣಕ್ಕಾಗಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಟೀಕಿಸಿದರು.

ಇದೇ ವೇಳೆ ವರ್ಷ 8,  ಅವಾಂತರ 108, ಸುಳ್ಳಿನ ಸಂಭ್ರಮ ಎಂಬ ಕಿರುಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ,  ನರೇಂದ್ರ ಮೋದಿ  ಗುಜರಾತ್ ಸಿಎಂ ಆಗಿ 12 ವರ್ಷ, ಪ್ರಧಾನಿಯಾಗಿ 8 ವರ್ಷ ಒಟ್ಟು 20 ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. ಪ್ರಧಾನಿಯಾಗುವ ಮುನ್ನ ಹಲವು ಭರವಸೆಗಳನ್ನ ನೀಡಿದ್ದರು.  ವಿದೇಶದಲ್ಲಿರುವ ಕಪ್ಪು ಹಣ ತರುತ್ತೇವೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಮೋದಿ ಪ್ರಧಾನಿಯಾದ ನಂತರ ಯಾವುದೇ ಭರವಸೆ ಈಡೇರಿಸಲಿಲ್ಲ ಎಂದು ಕುಟುಕಿದರು.

2014ರ ಲೋಕಸಭಾ ಚುನಾವಣೆ ವೇಳೆ 83.4 ಕೋಟಿ ಮತದಾರರಿದ್ದರು. 17 ಕೋಟಿ ಮತದಾರರು ಬಿಜೆಪಿಗೆ ಮತ ಹಾಕಿದ್ದರು. ದೇಶದ ಜನರ ಗಮನ ಬೇರೆಡೆ ಸೆಳೆಯುವಲ್ಲಿ ಯಶಸ್ವಿಯಾದರು. ಕಪ್ಪು ಹಣ, ನಿರುದ್ಯೋಗ, ಬೆಲೆ ಏರಿಕೆ ವಿಚಾರ ಡೈವರ್ಟ್ ಮಾಡಿದರು. ಪುಲ್ವಾಮಾ, ಬಾಲಾಕೋಟ್​ ದಾಳಿ ವಿಚಾರ ಮುಂದಿಟ್ಟರು.​ 2019ರಲ್ಲಿ ಲೋಕಸಭಾ ಚುನಾವಣೆ ವೇಳೆ 94 ಕೋಟಿ ಮತದಾರರಿದ್ದರು. 22.09 ಕೋಟಿ ಮತದಾರರು ಬಿಜೆಪಿಗೆ ಮತ ಹಾಕಿದ್ದರು. ಮತ್ತೆ ಅಧಿಕಾರಕ್ಕೆ ಬಂದಾಗಲೂ ಜನಸಾಮಾನ್ಯರ ಕೆಲಸ ಮಾಡಲಿಲ್ಲ. ಪುಲ್ವಾಮಾ ದಾಳಿ ಮುಂದಿಟ್ಟುಕೊಂಡು ಗೆದ್ದರು ಎಂದು ಸಿದ್ಧರಾಮಯ್ಯ ಕಿಡಿಕಾರಿದರು.

ರಾಜ್ಯಕ್ಕೆ 1,29,766 ಕೋಟಿ ನೀಡಿರುವುದಾಗಿ ಜಾಹೀರಾತು ಕೊಟ್ಟಿದ್ದಾರೆ. ರಾಜ್ಯದಿಂದ ಸಂಗ್ರಹವಾಗಿರುವ ತೆರಿಗೆ 19 ಲಕ್ಷ ಕೋಟಿ ರೂಪಾಯಿ. 19 ಲಕ್ಷ ಕೋಟಿ ತೆರಿಗೆ ಕಟ್ಟಿರುವ ರಾಜ್ಯಕ್ಕೆ ಇವರು ಭಿಕ್ಷೆ ನೀಡಿದ್ದಾರೆ. ರಾಜ್ಯದ 25 ಬಿಜೆಪಿ ಸಂಸದರು ಅನ್ಯಾಯದ ಬಗ್ಗೆ ಚಕಾರವೆತ್ತಲಿಲ್ಲ. ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಬಿಜೆಪಿ ಸಂಸದರು ಮಾತಾಡಲಿಲ್ಲ. ನೋಟ್​ ಬ್ಯಾನ್​ನಿಂದ ಭಯೋತ್ಪಾದನೆ, ಕಪ್ಪು ಹಣ ನಿಯಂತ್ರಿಸುತ್ತೇವೆ. ರಾತ್ರೋರಾತ್ರಿ ನೋಟ್​ಬ್ಯಾನ್​ ಮಾಡಿ ಉದ್ದುದ್ದ ಭಾಷಣ ಮಾಡಿದರು  ಎಂದು ಸಿದ್ಧರಾಮಯ್ಯ ಲೇವಡಿ ಮಾಡಿದರು.

Key words: PM-Modi -not -fulfilled – promise-former CM- Siddaramaiah.

ENGLISH SUMMARY…

Eight years of Modi govt.: Modi hasn’t fulfilled any promise – Former CM Siddaramaiah
Bengaluru, July 2, 2022 (www.justkannada.in): “Prime Minister is giving lot advertisements in the media on completion of 8 years in power. But Modi has not fulfilled any promises as assured. I wonder why they are celebrating,” observed leader of the opposition Siddaramaiah.
He released a booklet titled, “Varsha 8, Avaantara 108,” (8 years, 108 faults) on the occasion. “Narendra Modi has enjoyed power as a CM for 12 years, and a PM for 8 years. He has enjoyed power for 20 long years till now. He had given many assurances to the people of the country before holding high office of the country. He had promised to bring the black money. He had also promised of creating 2 crore jobs every year, but has not fulfilled any of those promises,” he said.
“There were 83.4 voters during the 2014 LS polls. 17 crore voters had voted for them. He was successful in diverting the attention of the voters from failures like black money, unemployment, price hike, etc. Incidents of the Pulwama, Balakot attacks were given prominence. In 2019 there were 94 crore voters and 22.09 voters voted for BJP. This time also he didn’t work for the common man. He was successful again in winning the election by highlighting the Pulwama attack,” he alleged.
In the advertisements, the BJP has claimed that the Centre has given Rs.1,29,766 crore. But the tax collected from our state is Rs. 19 lakh crore. Is it not alms given to our State which has contributed such a big amount in the form of taxes? The 25 MPs of the state didn’t open their mouth, they didn’t speak about the injustice meted out to our State,” he added.
Keywords: Leader of the opposition/ Siddaramaiah/ Prime Minister Narendra Modi/ 8 years