ವೈಟ್ ಫಿಲ್ಡ್ ಮೆಟ್ರೋ ಮಾರ್ಗ ಉದ್ಘಾಟಿಸಿ ಸಿಬ್ಬಂದಿ ಮತ್ತು ಶಾಲಾ ಮಕ್ಕಳ ಜೊತೆ ಪ್ರಯಾಣಿಸಿದ ಪ್ರಧಾನಿ ಮೋದಿ.

Promotion

ಬೆಂಗಳೂರು,ಮಾರ್ಚ್,25,2023(www.justkannada.in):  ವೈಟ್ ಫಿಲ್ಡ್-ಕೆ.ಆರ್ ಪುರಂ ಮೆಟ್ರೋ ಮಾರ್ಗವನ್ನ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ಕೆ.ಆರ್.ಪುರಂನಿಂದ ವೈಟ್‌ ಫೀಲ್ಡ್‌ ವರೆಗಿನ ನೂತನ ಮೆಟ್ರೋ ಮಾರ್ಗ 4,500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. 13.71 ಕಿಲೋಮೀಟರ್ ಇರುವ ನೂತನ ನೇರಳ ಮಾರ್ಗ 12 ಮೆಟ್ರೋ ನಿಲ್ದಾಣಗಳನ್ನು ಹೊಂದಿದೆ.

ಮೆಟ್ರೋ ಮಾರ್ಗ ಉದ್ಘಾಟನೆ ನಂತರ ಪ್ರಧಾನಿ  ಮೋದಿ ಮೆಟ್ರೋದಲ್ಲಿ ಪ್ರಯಾಣ ಮಾಡಿದರು.  ಶಾಲಾಮಕ್ಕಳು ಸಿಬ್ಬಂದಿಗಳೊಂದಿಗೆ 4 ಕಿ.ಮೀವರೆಗೆ ಪ್ರಧಾನಿ ಮೋದಿ ಪ್ರಯಾಣ ಬೆಳೆಸಿದರು.

Key words: PM-Modi -inaugurated – White Field -Metro line