ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯಕ್ಕೆ ಬಹಳಷ್ಟು ಅನುಕೂಲ ಆಗಿದೆ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

Promotion

ಹುಬ್ಬಳ್ಳಿ,ಜನವರಿ,12,2023(www.justkannada.in): ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯಕ್ಕೆ ಬಹಳಷ್ಟು ಅನುಕೂಲ ಆಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

ರಾಷ್ಟ್ರೀಯ ಯುವಜನೋತ್ಸವ ಉದ್ಘಾಟಿಸಲು ಇಂದು ಹುಬ್ಬಳ್ಳಿ-ಧಾರವಾಡಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,  ರಾಷ್ಟ್ರೀಯ ಯುವಜನೋತ್ಸವ ಉದ್ಘಾಟಿಸಲು ಮೋದಿ ಬರುತ್ತಿದ್ದಾರೆ. ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು. ಕಾಲೇಜು ವಿದ್ಯಾರ್ಥಿಗಳು ನೋಂದಣಿ ಮಾಢಿಕೊಂಡು ಬರುತ್ತಿದ್ದಾರೆ. ನಾವು 25 ಸಾವಿರ ವಿದ್ಯಾರ್ಥಿಗಳ ನೋಂದಣಿ ಟಾರ್ಗೆಟ್ ಮಾಡಿದ್ದವು.  ಆದರೆ ವಿದ್ಯಾರ್ಥಿಗಳ ಸಂಖ್ಯೆ 50 ಸಾವಿರ ದಾಟಿದೆ. ಮೋದಿ ಹೋಗುವ ರಸ್ತೆಗಳಲ್ಲೂ ಲಕ್ಷಾಂತರ ಜನ ಬರುತ್ತಿದ್ದಾರೆ.  ಮಾರ್ಗಮಧ್ಯೆ ಜನರಿಗೆ ಪ್ರಧಾನಿ ಮೋದಿ ಶುಭಕೋರುವ ಸಾಧ್ಯತೆ ಇದೆ ಎಂದರು.

ಮೋದಿ ಅಧಿಕಾರಕ್ಕೆ ಬಂದ ಮೇಳೆ ಬಹಳಷ್ಟು ಒಳ್ಳೆಯದಾಗಿದೆ. ಉತ್ತರ ಕರ್ನಾಟಕಕ್ಕೆ ಬಹಳಷ್ಟು ಅನುಕೂಲವಾಗಿದೆ. ಫೆಬ್ರವರಿ ಮಾರ್ಚ್ ನಲ್ಲಿ ಐಐಟಿ ಉದ್ಘಾಟನೆಗೆ ಮತ್ತೆ  ಮೋದಿ ಬರಲಿದ್ದಾರೆ. ರಾಜಕೀಯ ರ್ಯಾಲಿಗೆ ಮತ್ತೊಮ್ಮೆ ಹುಬ್ಬಳ್ಳಿ- ಧಾರವಾಡಕ್ಕೆ ಬರ್ತಾರೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.

Key words: PM-Modi-hubli-Natinal youth day-  Union Minister -Prahlad Joshi.