ಪ್ರಧಾನಿಗೆ ನವಿಲು ಕರೆದು ಆಹಾರ ಹಾಕೋಕೆ ಟೈಂ ಸಿಗುತ್ತೆ: ಸಂತ್ರಸ್ತೆ ಪರವಾಗಿ ಟ್ವೀಟ್ ಮಾಡೋಕೆ ಸಮಯ ಸಿಗಲ್ಲ- ಸಿದ್ಧರಾಮಯ್ಯ ಕಿಡಿ…

Promotion

ಮೈಸೂರು,ಅಕ್ಟೋಬರ್,6,2020(www.justkannada.in): ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಯುವತಿ ಮೇಲಿನ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ ಮಾತನಾಡದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.jk-logo-justkannada-logo

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಸಿದ್ಧರಾಮಯ್ಯ, ಪ್ರಧಾನಿಗೆ ನವಿಲು ಕರೆದು ಆಹಾರ ಹಾಕೋಕೆ ಟೈಂ ಸಿಗುತ್ತೆ, ಟ್ರಂಪ್ ಗೆ ಟ್ವೀಟ್ ಮಾಡಿ ಶುಭಕೋರೊದಕ್ಕೆ ಟೈಂ ಸಿಗುತ್ತೆ. ಅದರೆ ಸಂತ್ರಸ್ತೆ ಪರವಾಗಿ ಟ್ವೀಟ್ ಮಾಡೋಕೆ ಮೋದಿಗೆ ಟೈಂ ಸಿಗಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.pm-modi-food-no-time-tweet-siddaramaiah-mysore

ಹಾಗೆಯೇ ನಾವು ದೆಹಲಿ ನಿರ್ಭಯ ಪ್ರಕರಣದಲ್ಲಿ ಎಷ್ಟೊಂದು ಸಹಾಯ ಮಾಡಿದ್ವಿ. ಆದ್ರೆ ಇವರು ಪೊಲೀಸರನ್ನ ಬಳಸಿಕೊಂಡು ಸಂತ್ರಸ್ಥೆಯನ್ನು ಸೀಮೆಎಣ್ಣೆ ಹಾಕಿ ಬೇಯಿಸಿದ್ರು.ಪೊಲೀಸರನ್ನ ಬಳಸಿಕೊಂಡು ರಾಹುಲ್ ಗಾಂಧಿ, ಪ್ರಿಯಾಂಕಗಾಂಧಿ ಮೇಲೆ ಹಲ್ಲೆ ಮಾಡಿಸಿದರು ಎಂದು ಸಿದ್ಧರಾಮಯ್ಯ ಹರಿಹಾಯ್ದರು.

Key words: PM modi –food- No time – tweet – Siddaramaiah-mysore