ಹಿರಿಯ ಸಂಶೋಧಕ  ಡಾ.ಚಿದಾನಂದ ಮೂರ್ತಿ ನಿಧನಕ್ಕೆ ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿ ಸಂತಾಪ…..

Promotion

ಬೆಂಗಳೂರು,ಜ,11,2020(www.justkannada.in): ಹಿರಿಯ ಸಂಶೋಧಕ ಹಾಗೂ ಸಾಹಿತಿ ಪ್ರೊ.ಡಾ. ಚಿದಾನಂದ ಮೂರ್ತಿ ಅವರ ನಿಧನಕ್ಕೆ  ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ಟ್ವಿಟ್ ಮಾಡಿರುವ ಪ್ರಧಾನಿ ಮೋದಿ, ಸಾಹಿತಿ ಚಿದಾನಂದ ಮೂರ್ತಿ ಅವರು ಸಂಸ್ಕೃತಿ ಸಾಹಿತ್ಯದ ದಿಗ್ಗಜರಾಗಿದ್ರು. ಕನ್ನಡ ಭಾಷೆಯ ಬಗ್ಗೆ ಅವರಿಗೆ ಇದ್ದ ಉತ್ಸಹ ನಿಜಕ್ಕೂ ಗಮನಾರ್ಹವಾದ್ದದ್ದು. ಚಿದಾನಂದಮೂರ್ತಿ ಅವರ ನಿಧನ ದುಃಖಕರವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.

ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ  ಸಂಶೋಧಕ, ಹಿರಿಯ ಸಾಹಿತಿ, ಡಾ. ಚಿದಾನಂದ ಮೂರ್ತಿ(88) ಅವರು ಇಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಚಿದಾನಂದಮೂರ್ತಿ ಅವರ ಅಂತ್ಯಕ್ರಿಯೆ ನೆರವೇರಲಿದೆ .

Key words: PM Modi- condoles – death – senior researcher -Dr Chidananda Murthy