ಬೆಲೆ ಏರಿಕೆಗೆ ಪಿಎಂ ಮೋದಿ ಮತ್ತು ಸಿಎಂ ಬೊಮ್ಮಾಯಿ ಕಾರಣ -ರಣದೀಪ್ ಸುರ್ಜೇವಾಲ.

Promotion

ಚಿತ್ರದುರ್ಗ,ಸೆಪ್ಟಂಬರ್,27,2022(www.justkannada.in):  ದೇಶದಲ್ಲಿ ಮತ್ತು ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದು ಇದಕ್ಕೆ ಪ್ರಧಾನಿ ಮೋದಿ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಕಾರಣ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಕಿಡಿಕಾರಿದ್ದಾರೆ.

ಚಿತ್ರದುರ್ಗದಲ್ಲಿ ಇಂದು ಮಾತನಾಡಿದ ರಣದೀಪ್ ಸುರ್ಜೇವಾಲ, ಬೆಲೆ ಏರಿಕೆ ಎಂಬುದು ಜನರಲ್ಲಿ ತಲ್ಲಣ ಸೃಷ್ಠಸಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಿಎಸ್ ಐ ಮತ್ತು ಕೆಪಿಎಸ್ ಸಿ ಹಗರಣ ಬಯಲಾಗಿದೆ.  ಯುವಕರ ಭವಿಷ್ಯ ಮಾರಾಟ ಮಾಡಲಾಗುತ್ತಿದೆ.  ಬಿಜೆಪಿ ಕಾರ್ಯಕರ್ತರಿಂದಲೂ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಬೊಮ್ಮಾಯಿ ಸರ್ಕಾರದಲ್ಲಿ ಲಂಚ ನೀಡದೇ ಕೆಲಸವಾಗಲ್ಲ ಮಠಗಳಿಗೆ ಸಹಾಯಧನ   ಬಿಡುಗಡೆ ಮಾಡಲು ಕಮಿಷನ್ ಪಡೆಯುತ್ತಾರೆ. ಇದು ಭ್ರಷ್ಟಾಚಾರ, 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

Key words: PM Modi – CM Bommai – responsible – price hike-Randeep Surjewala