ಮೈಸೂರನ್ನ ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸಲು ಪಣ: ಉಚಿತ ಬಟ್ಟೆ ಬ್ಯಾಗ್ ವಿತರಣೆ- ಡಿಸಿ ರೋಹಿಣಿ ಸಿಂಧೂರಿ…

kannada t-shirts

ಮೈಸೂರು,ಏಪ್ರಿಲ್,3,2021(www.justkannada.in):  ಮೈಸೂರು ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಜಿಲ್ಲಾಡಳಿತ ಪಣ ತೊಟ್ಟಿದ್ದು, ಪ್ರತಿ ಮನೆಗೆ ಜಿಲ್ಲಾಡಳಿತದಿಂದಲೇ ಉಚಿತವಾಗಿ ಬಟ್ಟೆ ಬ್ಯಾಗ್ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.Illegally,Sand,carrying,Truck,Seized,arrest,driver

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪ್ಲಾಸ್ಟಿಕ್ ಬ್ಯಾಗ್ ಗಳ ಬದಲು ಬಟ್ಟೆ ಬ್ಯಾಗ್ ಬಳಕೆ ಮಾಡಬೇಕು. ಮೈಸೂರು ಜಿಲ್ಲೆಯಲ್ಲಿ 15 ಲಕ್ಷ ಬ್ಯಾಗ್ ನೀಡುತ್ತಿದ್ದೇವೆ. ಪ್ರತಿ ಮನೆಗೆ ಎರಡು ಪರಿಸರ ಸ್ನೇಹಿ ಬ್ಯಾಗ್ ವಿತರಣೆ ಮಾಡುತ್ತೇವೆ. ಸ್ಥಳೀಯ ಸಂಸ್ಥೆಗಳ 14 ಮತ್ತು 15 ನೇ ಹಣಕಾಸು ಯೋಜನೆ ಅನುದಾನಲ್ಲಿ ಬ್ಯಾಗ್ ತಯಾರಿಕೆಗೆ ಬಳಕೆ ಮಾಡಲಾಗುತ್ತಿದೆ.Plan - Mysore's- Plastic Free- District- Free -clothing- bag –delivery- DC- Rohini Sindhuri.

ಗ್ರಾಮೀಣ ಪ್ರದೇಶಗಳಲ್ಲೂ ಸ್ಥಳೀಯ ಸಂಘ ಸಂಸ್ಥೆಗಳು, ಪಂಚಾಯಿತಿಗಳಿಂದಲೂ ಬ್ಯಾಗ್ ವಿತರಣೆ ಮಾಡಲಾಗುತ್ತದೆ. ದೇವಸ್ಥಾನಗಳ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ 5 ರೂ.ಗೆ ಅಂಗಡಿಗಳಿಗೆ ನೀಡಲಾಗುತ್ತೆ‌. ಈ ಮೂಲಕ ಜನರಲ್ಲಿ ಅರುವು ಮೂಡಿಸಿ ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಪರಿಣಾಮಕಾರಿಯಾಗಿ ಕೆಲಸ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.

Key words: Plan – Mysore’s- Plastic Free- District- Free -clothing- bag –delivery- DC- Rohini Sindhuri.

 

website developers in mysore