ಪಿಎಫ್ ಐ ಬ್ಯಾನ್ ವಿಚಾರ: ಶಾಂತಿ ನೆಲಸುತ್ತೆ ಅನ್ನೋ ನಂಬಿಕೆ ಇಲ್ಲ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

Promotion

ಬೆಂಗಳೂರು,ಸೆಪ್ಟಂಬರ್,29,2022(www.justkannada.in):  ಐದು ವರ್ಷಗಳ ಕಾಲ ಪಿಎಫ್ ಐ ಬ್ಯಾನ್ ವಿಚಾರ ಸಂಬಂಧ, ಶಾಂತಿ ನೆಲಸುತ್ತೆ ಅನ್ನೋ ನಂಬಿಕೆ ಇಲ್ಲ ಸರ್ಕಾರ ತೀರ್ಮಾನಗಳನ್ನ ತಿಳಿಸಬೇಕು ಸಂಘಟನೆಗಳ ವಾಸ್ತವಾಂಶ ಜನರ ಮುಂದುಡಬೇಕು ಇಲ್ಲದಿದ್ದರೇ ಶಾಂತಿ ಕದಡುವ ಕೆಲಸ ಆಗುತ್ತೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

ಈ ಕುರಿತು ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಭಯೋತ್ಪಾದನೆ ಮಾಡುವವರನ್ನ ಬಲಿ ಹಾಕಲಿ. ಇದಕ್ಕೆ ನಮ್ಮದು ಯಾವುದೇ ತಕರಾರು ಇಲ್ಲ.  ಒಂದು ಸಂಘಟನೆ ಮಾಹಿತಿ ಮೇಲೆ ಕ್ರಮವಾಗಿದೆ.  ಹಿಂದೂ ರಾಷ್ಟ್ರಕ್ಕೆ 800 ಸಾವಿರ ವರ್ಷಗಳ  ಇತಿಹಾಸವಿದೆ. ಭಾರತ ಒಂದು ಬಲಾಢ್ಯ ರಾಷ್ಟ್ರ, ಹಿಂದೆ ಶತಮಾನಗಳ ಕಾಲ ಹಿಂದೂಸ್ತಾನವನ್ನು ಆಳಿದ ಮೊಘಲರಿಂದಲೇ ಅದನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವುದು ಸಾಧ್ಯವಾಗಲಿಲ್ಲ. ಇನ್ನು ಪಿಎಫ್‌ಐ ನಂಥ ಒಂದು ಸಂಘಟನೆ ಭಾರತವನ್ನು ಒಂದು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡೀತೇ? ಎಂದು ಪ್ರಶ್ನಿಸಿದರು.

ಕರ್ನಾಟಕದಲ್ಲಿ ನಡೆದ 3-4 ಕೊಲೆ ಮತ್ತು ಕೇರಳದಲ್ಲಿ ನಡೆದ ಕೆಲ ಘಟನೆಗಳ ಆಧಾರದಲ್ಲಿ ಪಿಎಫ್‌ಐ ಮತ್ತು ಅದರ ಅಂಗಸಂಸ್ಥೆಗಳನ್ನು ಬ್ಯಾನ್ ಮಾಡಲಾಗಿದೆ ಅಂತ ಕೇಂದ್ರ ಸರ್ಕಾರ ಹೇಳಿದೆ. ಆ ಸಂಘಟನೆಯ ಸದಸ್ಯರು ಯಾವ್ಯಾವ ಕೃತ್ಯಗಳಲ್ಲಿ ಭಾಗಿಯಾಗಿದ್ದರು ಅನ್ನೋದನ್ನು ರಾಜ್ಯ ಸರ್ಕಾರ ಜನರ ಮುಂದಿಡಬೇಕೇ ಹೊರತು ಸಂಘಟನೆ ಬಗ್ಗೆ ಇಲ್ಲಸಲ್ಲದ್ದು ಹೇಳಿ ಭಯದ ವಾತಾವರಣ ಮೂಡಿಸಬಾರದು ಎಂದರು.

Key words: PFI-ban  – Former CM -HD Kumaraswamy.