ವಾಹನ ಸವಾರರಿಗೆ ತೈಲ ಬೆಲೆ ಏರಿಕೆ ಶಾಕ್: ಇಂದು ಸಹ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ.

ಬೆಂಗಳೂರು,ಮಾರ್ಚ್,31,2022(www.justkannada.in):  ಪಂಚರಾಜ್ಯ ಚುನಾವಣೆ ಬಳಿಕ ತೈಲ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಇದರಿಂದಾಗಿ ವಾಹನ ಸವಾರರಿಗೆ ಕಂಗಾಲಾಗಿದ್ದಾರೆ. ಸತತ 10ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ.

ಇಂದು ಪೆಟ್ರೋಲ್ 84 ಪೈಸೆ, ಡೀಸೆಲ್ 78 ಪೈಸೆ ಹೆಚ್ಚಳವಾಗಿದ್ದು ಕಳೆದ 10 ದಿನದಿಂದಲೂ ತೈಲಬೆಲೆ ನಿರಂತರ ಏರಿಕೆಯಾಗಿದ್ದು ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ.  ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 107,28 ರೂ,  ಡೀಸೆಲ್ ಬೆಲೆ 91,26  ರೂ.ಗೆ ತಲುಪಿದೆ.petrol-diesel-prices-up-again

ಪಂಚರಾಜ್ಯ ಚುನಾವಣೆಗೂ ಮುನ್ನ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿತ್ತು. ಇದೀಗ ಚುನಾವಣೆ ಬಳಿಕ ಮತ್ತೆ ತೈಲಬೆಲೆ ಏರಿಕೆಯತ್ತ ಸಾಗುತ್ತಿದೆ.

Key words: petrol-diesel-rate-hike