ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಗೆ ಖಂಡನೆ: ಸೈಕಲ್  ಸವಾರಿ ಮಾಡಿ ವಾಟಾಳ್ ನಾಗರಾಜ್ ವಿಶೇಷ ಪ್ರತಿಭಟನೆ.

ಮೈಸೂರು,ಜೂನ್,10,2021(www.justkannada.in): ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯನ್ನ ಖಂಡಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸೈಕಲ್ ನಲ್ಲಿ ಸವಾರಿ  ಮಾಡುವ ಮೂಲಕ ವಿಭಿನ್ನ ಪ್ರತಿಭಟನೆ ನಡೆಸಿದರು.jk

ನಗರದ ಹಾರ್ಡಿಂಗ್ ವೃತ್ತದ ಬಳಿ ಸೈಕಲ್ ನಲ್ಲಿ ಸವಾರಿ ಆರಂಭಿಸಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್, ಬೆಲೆ ಏರಿಕೆ ಮಾಡಿ ಪ್ಯಾಕೇಜ್ ಲಕೇಜ್ ಅಂತ ಘೋಷಣೆ ಮಾಡೋದು. ಬೆಲೆ ಏರಿಕೆಯಿಂದ ದೇಶದ ಜನರ ಬೆನ್ನು ಮೂಳೆ ಮುರಿದಿದೆ. ಜನ ಕೇಂದ್ರದ ನೀತಿ ವಿರೋಧಿಸಿ ಜನ ಹೋರಾಟ ಮಾಡಬೇಕು. ಜೈಲಿಗೆ ಹೋಗಬೇಕು. ಜನಸಾಮಾನ್ಯರಿಗೆ ಬಾರಿ ತೊಂದರೆ ಆಗುತ್ತಿದೆ, ಇದು ಒಳ್ಳೆಯದಲ್ಲ. ಎಂಪಿ ಮತ್ತು ಎಂಎಲ್ಎಗಳು ಏನು ಮಾಡುತ್ತಿದ್ದಾರೆ.? ನಿಮಗೆ ಜವಾಬ್ದಾರಿ ಗೌರವ ಇದ್ದರೆ ಪ್ರಧಾನಿ ವಿರುದ್ಧ ನಿಂತು ಒತ್ತಾಯ ಮಾಡಬೇಕು. ಪಾರ್ಲಿಮೆಂಟ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ವಾಟಾಳ್ ನಾಗರಾಜ್ ಒತ್ತಾಯ ಮಾಡಿದರು.

ಪಿಯುಸಿ ಎಸ್ಎಸ್ಎಲ್ಸಿ  ವಿದ್ಯಾರ್ಥಿಗಳನ್ನ ಪಾಸ್ ಮಾಡಿ.

ಪಿಯುಸಿ ಎಸ್ಎಸ್ಎಲ್ಸಿ  ವಿದ್ಯಾರ್ಥಿಗಳನ್ನ ಪಾಸ್ ಮಾಡುವಂತೆ  ಸರ್ಕಾರಕ್ಕೆ  ಆಗ್ರಹಿಸಿದ ವಾಟಾಳ್ ನಾಗರಾಜ್, ವಿದ್ಯಾರ್ಥಿಗಳಿಗೆ ಬೇರೆ ಬೇರೆ ಪರೀಕ್ಷೆ ನಡೆಸಿ ತೊಂದರೆ ಕೊಡುತ್ತಿದ್ದೀರಿ. ಡಿಗ್ರಿ. ಡಿಪ್ಲೊಮಾ. ವಿದ್ಯಾರ್ಥಿಗಳನ್ನ ಪಾಸ್ ಮಾಡಬೇಕು. SSLC ಯಿಂದ ಡಿಗ್ರಿ. ಡಿಪ್ಲೊಮೊವರೆಗಿನ ವಿದ್ಯಾರ್ಥಿಗಳನ್ನ ಪಾಸ್ ಮಾಡಲೇಬೇಕು. ಈ ವಿಚಾರಕ್ಕೆ ಇದೆ 15ಕ್ಕೆ ಬೆಂಗಳೂರಿನಲ್ಲಿ ವಿದ್ಯಾರ್ಥಿಗಳ ಪರವಾಗಿ ಚಳುವಳಿ ನಡೆಸುತ್ತೇನೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.

Key words: Petrol -diesel –price- hike –condemned-Vatal Nagaraj- protest