ಜನರ ಆಶೀರ್ವಾದ ಬಿಜೆಪಿ ಪರ: ವಿಶ್ವಾಸದಿಂದ ಚುನಾವಣೆ ಎದುರಿಸಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ- ಶಾಸಕ ಸಿ.ಟಿ ರವಿ.

Promotion

ಚಿಕ್ಕಮಗಳೂರು,ಮಾರ್ಚ್,29,2023(www.justkannada.in): ರಾಜ್ಯದಲ್ಲಿ ಜನರ ಆಶೀರ್ವಾದ ಬಿಜೆಪಿಪರವಿದೆ. ಹೀಗಾಗಿ ವಿಶ್ವಾಸದಿಂದ ಚುನಾವಣೆ ಎದುರಿಸಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.

ಚುನಾವಣೆ ಘೋಷಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಟಿ ರವಿ,  ಹೋರಾಟ ಕುರುಕ್ಷೇತ್ರ ಕಾಲದಿಂದಲೂ ಇದೆ.  ದುರ್ಯೋಧನ ಬಂದು ಕೃಷ್ಣನನ್ನ ಭೇಟಿಯಾಗಿದ್ದನು . ಆದರೆ ಫಲಿತಾಂಶ ಕೌರವರ ನಾಶ, ಪಾಂಡವರಿಗೆ ಜಯ.  ಕೃಷ್ಣನ ಆಶೀರ್ವಾದ ಪಾಂಡವರ ಪರವಿತ್ತು. ಈಗ  ಜನರ ಆಶೀರ್ವಾದ ಬಿಜೆಪಿ ಪರವಿದೆ ಎಂದು ತಿಳಿಸಿದರು.

ಚುನಾವಣೆ ಘೋಷಣೆಯಾಗಿದೆ ಇಂದಿನಿಂದ ಮತ ಬೇಟೆ ಆರಂಭವಾಗಿದೆ. ಬಿಜೆಪಿ 365 ದಿನ ಜನಗಳ ಜೊತೆ ಇದ್ದು ಕೆಲಸ ಮಾಡಿದೆ.  ಹಾಗಾಗಿ, ಚುನಾವಣೆಗೆಂದು ವಿಶೇಷವಾದ ತಯಾರಿ ಮಾಡುವ ಅವಶ್ಯಕತೆ ಬರುವುದಿಲ್ಲ ಎಂದು ಭಾವಿಸಿದ್ದೇನೆ. ಕಳೆದ ಬಾರಿಯೂ ಹೇಳಿದ್ದೆ ಈಗಲೂ ಹೇಳುತ್ತೇನೆ ವಿಶ್ವಾಸದಿಂದ ಚುನಾವಣೆ ಎದುರಿಸುತ್ತೇವೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದರು.

Key words: People’s -blessings – BJP – MLA- CT Ravi.