Sunday, September 27, 2026

BDA Apartments

ಎಲ್ಲಾ ಸಮಯದಲ್ಲಿ ಮೂರ್ಖರನ್ನಾಗಿ ಮಾಡಲಾಗಲ್ಲ: ಬಿಜೆಪಿಗೆ ಜನ ತಕ್ಕ ಪಾಠ ಕಲಿಸು...
Home Front Page ಎಲ್ಲಾ ಸಮಯದಲ್ಲಿ ಮೂರ್ಖರನ್ನಾಗಿ ಮಾಡಲಾಗಲ್ಲ: ಬಿಜೆಪಿಗೆ ಜನ ತಕ್ಕ ಪಾಠ ಕಲಿಸುತ್ತಾರೆ- ಶಾಸಕ ಎಂ.ಬಿ ಪಾಟೀಲ್.

ಎಲ್ಲಾ ಸಮಯದಲ್ಲಿ ಮೂರ್ಖರನ್ನಾಗಿ ಮಾಡಲಾಗಲ್ಲ: ಬಿಜೆಪಿಗೆ ಜನ ತಕ್ಕ ಪಾಠ ಕಲಿಸುತ್ತಾರೆ- ಶಾಸಕ ಎಂ.ಬಿ ಪಾಟೀಲ್.

ವಿಜಯಪುರ,ಜೂನ್,25,2022(www.justkannada.in): ಆಪರೇಷನ್ ಕಮಲ ಎಂಬುದು ಪ್ರಜಾಸತ್ತಾತ್ಮಕ ವಿರೋಧಿ ಕೆಲಸ. ಎಲ್ಲಾ ಸಮಯದಲ್ಲಿ ಮೂರ್ಖರನ್ನಾಗಿ ಮಾಡಲಾಗಲ್ಲ. ಬಿಜೆಪಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ವಾಗ್ದಾಳಿ ನಡೆಸಿದರು.

ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಭಾರತ ಮಾತೆಗೆ ಕನ್ನಡದ ಆರತಿ ಕಾರ್ಯಕ್ರಮದಲ್ಲಿ ಮಾತನಾಡಿದ ಎಂ.ಬಿ. ಪಾಟೀಲ್, ಶಾಸಕರನ್ನು ಖರೀದಿಸಿ ರಾಜೀನಾಮೆ ಕೊಡಿಸಿ ಚುನಾವಣೆ ನಿಲ್ಲಿಸಿ ಅವರ ಸಹಾಯದಿಂದ ಸರ್ಕಾರ ರಚಿಸುವುದು ಬಿಜೆಪಿಯ ಕೆಲಸವಾಗಿದೆ. ಕರ್ನಾಟಕದ ಬಳಿಕ ಈಗ ಮಹಾರಾಷ್ಟ್ರದಲ್ಲಿ ನಡೆಯುತ್ತಿದೆ. ಬಿಜೆಪಿ ತಾನು ಮಾಡಿದೆಲ್ಲ ನಡೆಯುತ್ತೆ ಎಂದು ತಿಳಿದುಕೊಂಡಿದೆ. ಎಲ್ಲಾ ಸಮಯದಲ್ಲಿ ಜನರನ್ನು ಮೂರ್ಖರನ್ನಾಗಿ ಮಾಡಲಾಗಲ್ಲ. ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.ಎಲ್ಲಾ ಸಮಯದಲ್ಲಿ ಮೂರ್ಖರನ್ನಾಗಿ ಮಾಡಲಾಗಲ್ಲ mb patil mb

ಚುನಾವಣೆಯಲ್ಲಿ ನೇರವಾಗಿ ಆಯ್ಕೆಯಾಗಿ ಸರ್ಕಾರ ರಚಿಸಲಿ. ಇಂಥದೇ ಸರ್ಕಾರ ಕರ್ನಾಟಕದಲ್ಲಿ‌ ರಚನೆಯಾಗಿದೆ. 17 ಜನ ಕಾಂಗ್ರೆಸ್ ಶಾಸಕರನ್ನು ಆಪರೇಶನ್ ಕಮಲದ ಮೂಲಕ ತೆಗೆದುಕೊಂಡು 40% ಕಮಿಷನ್ ಸರ್ಕಾರವನ್ನು ರಚನೆ ಮಾಡಿದ್ದಾರೆ. ಇದನ್ನ ನಾನು ಹೇಳುತ್ತಿಲ್ಲ ಗುತ್ತಿಗೆದಾರರ ಸಂಘ ಹೇಳುತ್ತಿದೆ  ಎಂದು ಎಂ.ಬಿ ಪಾಟೀಲ್ ಹೇಳಿದರು.

Key words: People- teach lesson- BJP- MLA MB Patil