ಶಿರಾ ಕ್ಷೇತ್ರದ ಜನತೆ ಎರಡು ರಾಷ್ಟ್ರೀಯ ಪಕ್ಷಗಳನ್ನ ತಿರಸ್ಕರಿಸಿ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮನವಿ..

Promotion

ತುಮಕೂರು,ಸೆಪ್ಟಂಬರ್,30,2020(www.justkannada.in): ಶಿರಾ ಕ್ಷೇತ್ರದ ಜನತೆ ಎರಡು ರಾಷ್ಟ್ರೀಯ ಪಕ್ಷಗಳನ್ನ ತಿರಸ್ಕರಿಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.jk-logo-justkannada-logo

ನವೆಂಬರ್ 3 ರಂದು ಶಿರಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಇಂದು  ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಶಿರಾ ಕ್ಷೇತ್ರದ ಜನ ನನಗೆ ವಿಷ ಕೊಡುತ್ತೀರೋ, ಹಾಲು ಕೊಡುತ್ತೀರೋ.. ಇದನ್ನು ಶಿರಾ ಕ್ಷೇತ್ರದ ಜನರಿಗೆ ಬಿಡುತ್ತೇನೆ ಎಂದು ಹೇಳಿದರು.

ಶಿರಾ ಕ್ಷೇತ್ರಕ್ಕೆ ಸಿಎಂ ಪುತ್ರ  ಬಿವೈ ವಿಜಯೇಂದ್ರ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ವಿಜಯೇಂದ್ರ ಭೇಟಿ ಕೊಟ್ಟಿದ್ದಾರೆ. ಅವರು ಶಿರಾ ಕ್ಷೇತ್ರವನ್ನು ವಶಪಡಿಸಿಕೊಳ್ಳುವುದಕ್ಕೆ ಬಂದಿದ್ದಾರೆ. ಲೂಟಿ ಸರ್ಕಾರದವರು ಶಿರಾ ಕ್ಷೇತ್ರ ಗೆಲ್ಲಲು ಹೊರಟಿದ್ದಾರೆ. ಕಾಂಗ್ರೆಸ್ ಸಹವಾಸ ಮಾಡಿದ್ದಕ್ಕೆ ಜನರು ನನ್ನ ಒಪ್ಪಿಕೊಂಡಿಲ್ಲ. ನನ್ನ ಕಾರ್ಯಕರ್ತರೂ ಒಪ್ಪಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.people-shira-reject-two-national-parties-former-cm-hd-kumaraswamy

ಶಿರಾ ಕ್ಷೇತ್ರದಿಂದ್ಲೇ ಹೊಸ ರಾಜಕೀಯ ಆರಂಭವಾಗಬೇಕು. ಶಿರಾ ಜನತೆ ಎರಡೂ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಬೇಕು. ಕಾರ್ಯಕರ್ತರ ನಿರ್ಧಾರದಂತೆ ಟಿಕೆಟ್ ಫೈನಲ್ ಮಾಡ್ತೇವೆ. ಇನ್ನೆರಡು ದಿನಗಳಲ್ಲಿ ಜೆಡಿಎಸ್ ಟಿಕೆಟ್ ಫೈನಲ್ ಮಾಡ್ತೇವೆ  ಎಂದು ಹೆಚ್.ಡಿಕೆ ಹೇಳಿದರು.

Key words: people –Shira- reject –two- national parties- Former CM- HD Kumaraswamy