ಕೊರೊನಾ ಆತಂಕ ಮರೆತು ಪ್ರವಾಸಿತಾಣಗಳಲ್ಲಿ ಜನಸಾಗರ ! ಕೇಂದ್ರ ಗೃಹ ಸಚಿವಾಲಯ ತುರ್ತು ಸಭೆ

Promotion

ಬೆಂಗಳೂರು, ಜುಲೈ 11, 2021 (www.justkannada.in): ಪ್ರವಾಸಿ ತಾಣಗಳಿಗೆ ಭೇಟಿ ಕೊಡುವವರ ಸಂಖ್ಯೆ ಹೆಚ್ಚಿದೆ. ಸಾಗರದಂತೆ ಜನರು ಹರಿದುಬರುತ್ತಿದ್ದು, ಮತ್ತೆ ಆತಂಕ ಎದುರಾಗಿದೆ.

ಪ್ರವಾಸಿಗರು  ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಡುತ್ತಿರುವುದು ಕಂಡುಬರುತ್ತಿದೆ.  ಇದರಿಂದ ಮತ್ತೆ ಕೊರೊನಾ ಸೋಂಕಿನ ತೀವ್ರತೆ ಹೆಚ್ಚುವ ಆತಂಕ ಎದುರಾಗಿದೆ.

ಈ ವಿಷಯ ಮನಗಂಡು ಕೇಂದ್ರ ಗೃಹ ಸಚಿವಾಲಯ ತುರ್ತು ಸಭೆ ನಡೆಸಿದೆ. ಕೇಂದ್ರ ಗೃಹ ಸಚಿವಾಲಯ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ, ರಾಜ್ಯ ಸರ್ಕಾರಗಳೊಂದಿಗೆ ಸಭೆ ನಡೆಸಿದ್ದಾರೆ.

ಪ್ರವಾಸಿ ತಾಣಗಳಲ್ಲಿ ಕೊರೊನಾ ಸೋಂಕು ತಡೆ ಸಂಬಂಧ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದ್ದಾರೆ.