ಬಿಜೆಪಿ ಸರ್ಕಾರದಿಂದ ಜನ ಭ್ರಮನಿರಸನ: ಎರಡು ಕ್ಷೇತ್ರದಲ್ಲೂ ನಮ್ಮದೇ ಗೆಲುವು ಎಂದ ಮಾಜಿ ಸಿಎಂ ಸಿದ್ಧರಾಮಯ್ಯ.

Promotion

ಕಲ್ಬರ್ಗಿ,ಅಕ್ಟೋಬರ್,12,2021(www.justkannada.in): ಬಿಜೆಪಿ ಸರ್ಕಾರದಿಂದ ಜನ ಭ್ರಮನಿರಸನಗೊಂಡಿದ್ದಾರೆ. ಹೀಗಾಗಿ ಸಿಂದಗಿ , ಹಾನಗಲ್ ಎರಡು ಕ್ಷೇತ್ರದಲ್ಲೂ ನಮ್ಮದೇ ಗೆಲುವು ಎಂದ ಮಾಜಿ ಸಿಎಂ ಸಿದ್ಧರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ಸಿಂದಗಿ ಹಾಗೂ ‌ಹಾನಗಲ್ ಕ್ಷೇತ್ರಗಳ ಉಪಚುನಾವಣೆ ನಾವು ಬಯಸಿರಲಿಲ್ಲ. ಆದರೆ, ಆ ಕ್ಷೇತ್ರಗಳ ಶಾಸಕರಾಗಿದ್ದ ಎಂ.ಸಿ. ಮನಗೂಳಿ, ಸಿ.ಎಂ. ಉದಾಸಿ ಅವರ ನಿಧನದಿಂದ ಉಪಚುನಾವಣೆ ಎದುರಾಯಿತು ಎಂದು ಹೇಳಿದರು.

ನಾನು ಆರ್ ಎಸ್ ಎಸ್ ಬಗ್ಗೆ ಮಾತನಾಡುತ್ತಿರೋದು ಇದೇ ಮೊದಲಲ್ಲ. 1977ರಿಂದ ನಾನು ಆರ್‌ಎಸ್‌ಎಸ್‌ ವಿರುದ್ಧ  ಮಾತನಾಡುತ್ತಿದ್ದೇನೆ ಎಂದು ಸಿದ್ಧರಾಮಯ್ಯ ಹೇಳಿದರು.

Key words: People – disillusioned – BJP government-  Former CM -Siddaramaiah