“ಪೆಯ್ಡ್ ಪುಂಡರು ಕಾನೂನು, ಪೊಲೀಸರು ಕಸಕ್ಕೆ ಸಮಾನ ಎಂಬಂತೆ ವರ್ತಿಸುತ್ತಿದ್ದಾರೆ” : ರಾಜ್ಯ ಕಾಂಗ್ರೆಸ್ ಟ್ವೀಟ್

Promotion

ಬೆಂಗಳೂರು,ಮಾರ್ಚ್,29,2021(www.justkannada.in) : ಯುವತಿ ತನ್ನ ಕುಟುಂಬವನ್ನು ಬೆದರಿಸಲಾಗುತ್ತಿದೆ ಎಂದು ಪದೇ, ಪದೇ ಆರೋಪಿಸಿದ್ದಾಳೆ. ತನ್ನ ಕುಟುಂಬಕ್ಕೆ ರಕ್ಷಣೆ ನೀಡಿ ಎಂದು ಅಂಗಲಾಚಿದ್ದಾಳೆ. ಬಿಜಾಪುರದಲ್ಲಿದ್ದ ಯುವತಿ ಕುಟುಂಬ ಬೆಳಗಾವಿಯಲ್ಲಿ ದೂರು ದಾಖಲಿಸುತ್ತದೆ. ಬೆಳಗಾವಿಯಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಯ ಪೆಯ್ಡ್ ಪುಂಡರು ಕಾನೂನು, ಪೊಲೀಸರು ಕಸಕ್ಕೆ ಸಮಾನ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಆಕ್ರೋಶವ್ಯಕ್ತಪಡಿಸಿದ್ದಾರೆ.

ಸಿಡಿ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೂ ಬೆಳಗಾವಿಯಲ್ಲಿ ಏನಾಗುತ್ತಿದೆ ಎನ್ನುವುದು ಜಗತ್ತಿಗೆ ತಿಳಿದ ವಿಚಾರ, ಹೀಗಿರುವಾಗ ಯುವತಿ ಕುಟುಂಬ ಸ್ವತಂತ್ರವಾಗಿ ತಮ್ಮಿಚ್ಛೆಯಂತಿದೆಯೇ ಎನ್ನುವ ಅನುಮಾನ ಮೂಡುತ್ತದೆ.

Payed-scoundreldom-law-police-garbage-Equal-Behaving-State Congress-tweet

ಬಸವರಾಜ್ ಬೊಮ್ಮಾಯಿ ಅವರೇ, ಆರೋಪಿಯನ್ನು ಬಂಧಿಸದೆ, ಯುವತಿ ಕುಟುಂಬಕ್ಕೆ ರಕ್ಷಣೆ ನೀಡದೆ ಏನು ಮಾಡಲು ಹೊರಟಿದ್ದೀರಿ? ಎಂದು ಪ್ರಶ್ನಿಸಿದೆ.

key words : Payed-scoundreldom-law-police-garbage-Equal-Behaving-State Congress-tweet