ಹಿಂದೆ ಕಾಂಗ್ರೆಸ್ ಕಾಲದಲ್ಲಿ ಪೇ ಸಿಎಂ ನಡೆದಿರಲಿಲ್ವೆ..? ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್.

Promotion

ಬೆಂಗಳೂರು,ಸೆಪ್ಟಂಬರ್,26,2022(www.justkannada.in):  ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪೇ ಸಿಎಂ ಅಭಿಯಾನ ನಡೆಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ,  ಹಿಂದೆ ಕಾಂಗ್ರೆಸ್ ಕಾಲದಲ್ಲಿ ಪೇ ಸಿಎಂ ನಡೆದಿರಲಿಲ್ವೆ..?  ಜನರಲ್ಲಿ ಜಾಗೃತಿ ಮೂಡಿಸಲು ಕಾಂಗ್ರೆಸ್ ಹೊರಟಿದೆ. ಜನರಲ್ಲಿ ಅಗೌರವ ತೋರುವ ಕಾರ್ಯಕ್ರಮಕ್ಕೆ ಬೆಂಬಲವಿಲ್ಲ.  ಅಧಿಕಾರಕ್ಕೆ ಬಂದಾಗ ಸರಿ ಮಾಡುತ್ತೇನೆ ಎನ್ನಬಹುದಿತ್ತು. ಆದರೆ ಪೋಸ್ಟರ್ ಅಂಟಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಪಂಚರತ್ನಯಾತ್ರೆ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿಕೆ, ಮಳೆಯಿಂದಾಗಿ ಪಂಚರತ್ನಯಾತ್ರೆ ಮುಂದೂಡಲಾಗಿತ್ತು ಶೀಘ್ರದಲ್ಲೇ ಪಂಚರತ್ನ ಯಾತ್ರೆ ದಿನಾಂಕ ಘೋಷಣೆ ಮಾಡಲಾಗುತ್ತದೆ. ಭಾರತ್ ಜೋಡೋ ಯಾತ್ರೆ ಬಳಿಕ ಪಂಚರತ್ನಯಾತ್ರೆ ಶುರುವಾಗುತ್ತದೆ.  ನವೆಂಬರ್ 1 ರಂದು ಪಂಚರತ್ನ ಕಾರ್ಯಕ್ರಮ ನಡೆಯಬಹುದು. ನಾನು ಬೇರೆ ಪಕ್ಷದ ಬಗ್ಗೆ ಟೀಕೆ ಮಾಡುವುದಿಲ್ಲ. ನಮ್ಮ ಕಾರ್ಯಕ್ರಮಗಳ ಬಗ್ಗೆ ಮಾತ್ರ ಹೆಚ್ಚು ಗಮನ ಹರಿಸುತ್ತೇವೆ ಅಕ್ಟೋಬರ್  8ರಿಂದ ಜನತಾ ಮಿತ್ರಾ ಸಮಾರೋಪ ಮಾಡುತ್ತೇವೆ . ಮುಂದಿನ ರಾಜ್ಯ ಕಾರ್ಯಕಾರಣಿ ಸಭೆ ಬಗ್ಗೆಯೂ ನಿರ್ಧಾರ ಮಾಡಲಾಗುತ್ತದೆ ಎಂದು ತಿಳಿಸಿದರು.

Key words: Pay CM –  Congress- Former CM- HD Kumaraswamy -Tong.