ವಿಧಾನಸಭೆಯಲ್ಲಿ ಪೇ ಸಿಎಂ ಚರ್ಚೆ: ಯಾವ ಆಧಾರದಲ್ಲಿ ಸಿಎಂ ಫೋಟೊ ಬಳಸಿಕೊಂಡ್ರಿ- ಬಿಜೆಪಿ ಸದಸ್ಯರಿಂದ ಆಕ್ರೋಶ..

Promotion

ಬೆಂಗಳೂರು,ಸೆಪ್ಟಂಬರ್,22,2022(www.justkannada.in):  ರಾಜ್ಯ ವಿಧಾನಸಭೆಯಲ್ಲಿ ಫೇ ಸಿಎಂ ವಿಚಾರ ಚರ್ಚೆಯಾಗುತ್ತಿದ್ದು ಈ ವೇಳೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಸದಸ್ಯರು ಮುಗಿಬಿದ್ದು ವಾಗ್ದಾಳಿ ನಡೆಸಿದರು.

ಪೇ ಸಿಎಂ ಅಭಿಯಾನ ಕುರಿತು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ಬಿಜೆಪಿ ಶಾಸಕ ರಾಜೀವ್, ಯಾವ ಆಧಾರದಲ್ಲಿ ಸಿಎಂ ಫೋಟೊ ಬಳಸಿಕೊಂಡ್ರಿ. ಪೋಸ್ಟರ್ ನಲ್ಲಿ ಸಿಎಂ ಫೋಟೊ ಹಾಕಿದ್ದು ಯಾಕೆ ಎಂದು ಕಿಡಿಕಾರಿದರು. ನಿಮ್ಮ ಹತ್ತಿರ ಸಾಕ್ಷಿ ಇದ್ರೆ ದೂರು ಕೊಟ್ಟು ಕೇಸ್ ಹಾಕಿಸಿ. ಅಭಿಯಾನದ ಬಗ್ಗೆ ಪ್ರಿಯಾಂಕ್ ಖರ್ಗೆ ಒಪ್ಪಿಕೊಂಡಿದ್ದಾರೆ ಎಂದರು.

ಈ ವೇಳೆ  ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತು  ಇವರೇ ಕಾನೂನಾ..? ಕಾನೂನಡಿ ಕ್ರಮ ಕೈಗೊಳ್ಳಿ ಎದುರಿಸಲು ತಯಾರಿದ್ದೇವೆ ಎಂದು  ಶಾಸಕ ಕೃಷ್ಣಭೈರೇಗೌಡ ಟಾಂಗ್ ನೀಡಿದರು.

Key words: Pay CM – assembly- outrage – BJP members