ಪಕ್ಷ ವಿರೋಧಿಗಳೆಲ್ಲಾ ಕತ್ತೆಗೆ ಸಮಾನ- ನೂತನ ಎಂಎಲ್‌ಸಿ ಸಿ.ಎನ್‌.ಮಂಜೇಗೌಡ ವಾಗ್ದಾಳಿ.

Promotion

ಮೈಸೂರು,ಡಿಸೆಂಬರ್,15,2021(www.justkannada.in): ಶಾಸಕ ಜಿ.ಟಿ.ದೇವೇಗೌಡ ವಿರುದ್ಧ  ನೂತನ ಎಂಎಲ್‌ಸಿ ಸಿ.ಎನ್‌.ಮಂಜೇಗೌಡ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿರುವ ಸಿ.ಎನ್‌.ಮಂಜೇಗೌಡ, ಪಕ್ಷ ವಿರೋಧಿಗಳೆಲ್ಲಾ ಕತ್ತೆಗೆ ಸಮಾನ. ಕತ್ತೆ ಮೇಲೆ ರಾಮನ ಫೋಟೋ ಇಟ್ಟು ಊರೆಲ್ಲ ಮೆರವಣಿಗೆ ಮಾಡುತ್ತಾರೆ. ಊರಿನವರೆಲ್ಲ ನಮಸ್ಕಾರ ಮಾಡೋದನ್ನು ನೋಡಿ ಕತ್ತೆ ನನಗೇ ಕೈಮುಗಿಯುತ್ತಿದ್ದಾರೆ ಅಂದುಕೊಳ್ಳುತ್ತಿತ್ತು. ರಾಮಮಂದಿರ ತಲುಪಿದ ಮೇಲೆ ರಾಮನ ಫೋಟೋ ಎತ್ತಿಕೊಂಡು ಕತ್ತೆಯನ್ನು ಒಡೆದು ಓಡಿಸಿದಾಗ ಕತ್ತೆಗೆ ವಾಸ್ತವ ಅರ್ಥವಾಯ್ತು.  ಯಾರು ಕತ್ತೆ ಅಂತ ನೀವೇ ಅರ್ಥ ಮಾಡಿಕೊಳ್ಳಿ. ನನ್ನ ಪ್ರಕಾರ ಪಕ್ಷ ವಿರೋಧಿಗಳೆಲ್ಲ ಕತ್ತೆಗಳು ಎಂದರು.

ಸಚಿವ ಎಸ್.ಟಿ. ಸೋಮಶೇಖರ್‌ ಗೆ ವಾರ್ನಿಂಗ್. 

ಕಿಡ್ನಿ ಮಾರಾಟಗಾರ ಎಂಬ ಆರೋಪಕ್ಕೆ ತಿರುಗೇಟು ನೀಡಿ ಸಚಿವ ಎಸ್.ಟಿ. ಸೋಮಶೇಖರ್‌ ಗೆ ವಾರ್ನಿಂಗ್ ಕೊಟ್ಟ ಎಂಎಲ್ ಸಿ ಮಂಜೇಗೌಡ, ನನಗೂ ವೈಯುಕ್ತಿಕವಾಗಿ ಮಾತನಾಡೋಕೆ ಬರುತ್ತೆ. ಪಕ್ಷದ ವರಿಷ್ಠರು ಅನುಮತಿ ನೀಡಿದರೆ ಸಚಿವರ ಬಗ್ಗೆ ನಾನೂ ಮಾತನಾಡುತ್ತೇನೆ. ಮಾತನಾಡೋಕೆ ಬರುತ್ತೆ ಅಂತ ಏನೇನೋ ಮಾತನಾಡೋದಲ್ಲ.  ನಮ್ಮ ತಾಳ್ಮೆಗೂ ಮಿತಿ ಇದೆ.  ಅವರಿಗೆ ನಾನೂ ತಕ್ಕ ಉತ್ತರ ನೀಡೇ ನೀಡುತ್ತೇನೆ ಎಂದರು.

Key words: party- opponents – donkey-New MLC- CN Manjegauda