ಮೈಸೂರಿನ ಭಾಗಶಃ ಲಾಕ್‌ ಡೌನ್ ಮುಂದುವರಿಕೆ….

Promotion

ಮೈಸೂರು,ಜು,22,2020(www.justkannada.in): ದಿನೇ ದಿನೇ ಏರುತ್ತಿರುವ ಕೊರೋನಾ ಸೋಂಕು ತಡೆಗಟ್ಟಲು ಸಾಂಸ್ಕೃತಿಕ ನಗರಿ  ಮೈಸೂರಿನ ಕೆಲ ಭಾಗಗಳಲ್ಲಿ ಲಾಕ್ ಡೌನ್ ಜಾರಿ ಮಾಡಲಾಗಿದ್ದು, ಈ ಭಾಗಗಳಲ್ಲಿ ಲಾಕ್ ಡೌನ್ ಮುಂದುವರೆಯಲಿದೆ.jk-logo-justkannada-logo

ನಿನ್ನೆಯಷ್ಟೆ ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯದ ಜನತೆಯನ್ನುದ್ದೇಶಿಸಿ ಫೇಸ್ ಬುಕ್ ಲೈವ್ ನಲ್ಲಿ  ಮಾತನಾಡಿ ನಾಳೆಯಿಂದ ರಾಜ್ಯದಲ್ಲಿ ಎಲ್ಲೂ ಲಾಕ್ ಡೌನ್ ಇರುವುದಿಲ್ಲ ಎಂದಿದ್ದರು. ಆದರೆ ಮೈಸೂರಿನ ಭಾಗಶಃ ಲಾಕ್‌ಡೌನ್ ಇರಲಿದ್ದು ಸೋಂಕು ಹೆಚ್ಚಿರುವ ಎನ್ ಅರ್ ಕ್ಷೇತ್ರದಲ್ಲಿ  ನಿರ್ಬಂಧ ಮುಂದುವರೆಯಲಿದೆ.partial-lockdown-continuation-mysore

ಜುಲೈ24 ರವರೆಗೆ ಮೈಸೂರಿನಲ್ಲಿ ಭಾಗಶಃ ಲಾಕ್‌ಡೌನ್  ಮುಂದುವರೆಯಲಿದೆ. ಮಂಡಿ ಪೊಲೀಸ್ ಠಾಣೆ, ಲಷ್ಕರ್ ಪೊಲೀಸ್ ಠಾಣೆ , ನರಸಿಂಹರಾಜ ಪೊಲೀಸ್ ಠಾಣೆ, ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾಕ್‌ಡೌನ್ ಇರಲಿದ್ದು  ಈ ವ್ಯಾಪ್ತಿಯಲ್ಲಿ ಕೊರೊನಾ ರಾಪಿಡ್ ಟೆಸ್ಟ್ ಮುಂದುವರೆಯಲಿದೆ. ಹಿಂದಿನ ಆದೇಶದಲ್ಲಿ ಯಾವುದೇ ಬದಲಾವಣೆ ಇರಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

Key words: Partial -Lockdown -Continuation – Mysore.