ಪಾರ್ಕ್ ಜಾಗ ಅಕ್ರಮವಾಗಿ ನಿವೇಶನಗಳನ್ನಾಗಿ ಪರಿವರ್ತಿಸಿ ಮಾರಾಟ: ತನಿಖೆಗೆ ಆದೇಶ- ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್.

kannada t-shirts

ಮೈಸೂರು,ಅಕ್ಟೋಬರ್,5,2021(www.justkannada.in):  ಮೈಸೂರಿನಲ್ಲಿ ಖಾಸಗಿ ಬಡಾವಣೆಯೊಂದರಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟಿದ್ದ ಸ್ಥಳವನ್ನು ಅಕ್ರಮವಾಗಿ ನಿವೇಶನಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.

ಮೈಸೂರು ತಾಲ್ಲೂಕು ಕಸಬಾ ಹೋಬಳಿಯ ಅಯ್ಯಜ್ಜಯ್ಯನ ಹುಂಡಿ ಗ್ರಾಮದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು  ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್ ವಿ ರಾಜೀವ್, ಮುಡಾದಿಂದ ಅನುಮೋದನೆ ಪಡೆದುಕೊಂಡಿರುವ ಖಾಸಗಿ ಬಡಾವಣೆಯೊಂದರಲ್ಲಿ ಈ ರೀತಿ ಅಕ್ರಮವಾಗಿ ನಿವೇಶನಗಳನ್ನು ರಚಿಸಿ ಮಾರಾಟ ಮಾಡಲಾಗಿದೆ‌. ಈ ಪ್ರಕರಣದಲ್ಲಿ ಮುಡಾದ ಸಿಬ್ಬಂದಿಗಳು ಭಾಗಿಯಾಗಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕರು ಕೂಡ ನಿವೇಶನ ಖರೀದಿಸುವ ಮುನ್ನಾ ಮುಡಾಗೆ ಬಂದು ಮೂಲ ನಕ್ಷೆಯನ್ನು ಪರಿಶೀಲಿಸಬೇಕು. ಅಕ್ರಮವಾಗಿ ರಚಿಸಿರುವ ನಿವೇಶನಗಳನ್ನು ನೋಂದಣಿ ಮಾಡಿಕೊಡದಂತೆ ಸಬ್ ರಿಜಿಸ್ಟ್ರಾರ್ ಕಚೇರಿಗೂ ಪತ್ರ ಬರೆಯುವುದಾಗಿ ತಿಳಿಸಿದರು.

ಪ್ರಾಧಿಕಾರಕ್ಕೆ ನೀಡಿದ್ದ ಪಾರ್ಕ್ ಇತರ ಜಾಗವನ್ನು ನಕಲಿ ಮಾಡಿದ್ದಾರೆ. ಪ್ರಾಧಿಕಾರಕ್ಕೆ ನೀಡಿದ್ದ ಪ್ಲಾನ್ ಅನ್ನು ನಕಲಿ ಮಾಡಿದ್ದಾರೆ. ಪಾರ್ಕ್ ಜಾಗವನ್ನು ನಿವೇಶನ ಮಾಡಿ ಮಾರಾಟ ಮಾಡಿರುವುದು ತಿಳಿದುಬಂದಿದೆ. ಪ್ರಾಧಿಕಾರ  6 ನಿವೇಶನದ ದಾಖಲೆಗಳನ್ನು ಪೋರ್ಜರಿ ಮಾಡಿದ್ದಾರೆ. ಸಾರ್ವಜನಿಕರು ಈ ರೀತಿಯ ಮೋಸದ ಜಾಲದಲ್ಲಿ ಸಿಲುಕಬಾರದು. ನಮ್ಮ ಅಧಿಕಾರಿಗಳು ಈ ವಿಚಾರ ನಮ್ಮ ಗಮನಕ್ಕೆ ತಂದಿದ್ದಾರೆ. ಎಲ್ಲಾ ರೀತಿಯ ನೊಂದಣಿ ದಾಖಲೆಗಳು ರದ್ದು  ಮಾಡಲು ಹಿರಿಯ ಅಧಿಕಾರಿಗಳಿಗೆ ತನಿಖೆ ಮಾಡಲು ಕೂಡ ಅದೇಶ ಮಾಡಲಾಗಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ದ ಅಧ್ಯಕ್ಷ ಎಚ್ ವಿ ರಾಜೀವ್ ಹೇಳಿದರು.

Key words: Park – illegally –converted-site-  investigate- MUDA President -HV Rajeev.

website developers in mysore