ಪರೀಕ್ಷಾ ಪೇ ಚರ್ಚಾದಲ್ಲಿ ಮೈಸೂರು ವಿದ್ಯಾರ್ಥಿ ಭಾಗಿ: ಮಕ್ಕಳಿಗೆ ಹಲವು ಸಲಹೆಗಳನ್ನ ನೀಡಿದ ಪ್ರಧಾನಿ ಮೋದಿ

kannada t-shirts

ಮೈಸೂರು, ಏಪ್ರಿಲ್,1,2022(www.justkannada.in):  ಮಕ್ಕಳು ಮನಸನ್ನು ಹಿಡಿತದಲ್ಲಿ ಇಟ್ಟುಕೊಂಡು ಪಾಠ ಕಲಿಯಬೇಕು. ಆನ್‌ಲೈನ್ ಅಥವಾ ಆಫ್‌ಲೈನ್ ಯಾವುದೇ ಇದ್ದರೂ ಮನಸನ್ನು ಹಿಡಿತದಲ್ಲಿ ಇಟ್ಟುಕೊಂಡಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕರ್ನಾಟಕದಿಂದ ಏಕೈಕ ವಿದ್ಯಾರ್ಥಿಯಾಗಿ ಭಾಗವಹಿಸಿದ ಮೈಸೂರು ಜಿಲ್ಲೆಯ ದೊಡ್ಡ ಮಾರನಗೌಡನಹಳ್ಳಿಯ ಜವಾಹರ್ ನವೋದಯ ವಿದ್ಯಾಲಯದ 11ನೇ ತರಗತಿಯ ವಿದ್ಯಾರ್ಥಿ ಎಂ.ಬಿ.ತರುಣ್ ಅವರು ಶುಕ್ರವಾರ ಪರೀಕ್ಷಾ ಪೇ ಚರ್ಚೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಆನ್‌ಲೈನ್ ಪಾಠದಲ್ಲಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಡಕುಗಳ ಬಗ್ಗೆ ಪ್ರಶ್ನಿಸಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಅವರು ಉತ್ತರಿಸಿದರು.

ಆಫ್‌ಲೈನ್ ಪಾಠಕ್ಕಿಂತ ಆನ್‌ಲೈನ್ ಪಾಠ ಎಷ್ಟು ಮುಖ್ಯ ಎಂದು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಆಫ್‌ಲೈನ್ ತರಗತಿ ಒಂದು ನಿಗದಿತ ಸ್ಥಳದಲ್ಲಿ ಮಾತ್ರ ಕಲಿಯಲು ಅವಕಾಶ. ಆದರೆ ಆನ್‌ ಲೈನ್ ತರಗತಿಯಿಂದ ಯಾವಾಗ, ಎಲ್ಲಿಬೇಕಾದರೂ ಕಲಿಯಬಹುದು ಎಂದರು.

ಬೃಹತ್ ಎಲ್‌ ಇಡಿ ಪರದೆಯಲ್ಲಿ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳು ಮೋದಿ ಜೊತೆಗೆ ಚರ್ಚೆಯಲ್ಲಿ ಪಾಲ್ಗೊಂಡಿದಕ್ಕೆ ಸಂತಸ ವ್ಯಕ್ತಪಡಿಸಿ, ಮಕ್ಕಳ ಕಲಿಕೆ, ಪರೀಕ್ಷಾ ಫೋಬಿಯಾ ತಪ್ಪಿಸಲು ಕಾರ್ಯಕ್ರಮ ಸಹಕಾರಿ ಆಗಿತ್ತು, ಪರೀಕ್ಷೆ ಒತ್ತಡ ಕಡಿಮೆ ಮಾಡಲು ಪ್ರಧಾನಿಗಳ ಉತ್ತರ ಸಹಕಾರಿ ಆಗಿತ್ತು ಎಂದು ಹೇಳಿದರು.

Key words: pariksha pe charcha-PM Modi-students

website developers in mysore