‘ಪರೀಕ್ಷಾ ಪೇ ಚರ್ಚಾ’:  ಪರೀಕ್ಷಾ ತಯಾರಿ, ಆನ್ ಲೈನ್ , ಆಫ್ ಲೈನ್ ಶಿಕ್ಷಣ ಕುರಿತು ಮಕ್ಕಳಿಗೆ ಪ್ರಧಾನಿ ಮೋದಿ ಕಿವಿಮಾತು.

ನವದೆಹಲಿ, ಏಪ್ರಿಲ್,1,2022(www.justkannada.in): ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮ ನಡೆಸಿ ಪರೀಕ್ಷೆ ತಯಾರಿ ಮತ್ತು ಒತ್ತಡ ನಿವಾರಣೆ ಕುರಿತು ಮಕ್ಕಳಿಗೆ ಕಿವಿಮಾತು ಹೇಳಿದರು.

‘ಪರೀಕ್ಷಾ ಪೆ ಚರ್ಚಾದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮಕ್ಕಳೊಂದಿಗೆ ಮಾತನಾಡುವುದೆಂದರೆ ನನಗೆ ಇಷ್ಟ. ಆ ಸುಸಂದರ್ಭ ಬಂದಿದೆ.  ಮಕ್ಕಳ ಮನಸ್ಸಿನಲ್ಲಿ ಏಕೆ ಭಯ ಮೂಡಬೇಕು. ಕಳೆದ ಎಲ್ಲಾ ವರ್ಷಗಳಲ್ಲು ಪರೀಕ್ಷೆ ಬರೆದಿದ್ದೀರಿ    ಪರೀಕ್ಷೆ ಜೀವನದ  ಒಂದು ಭಾಗ  ಸಿದ‍್ಧತೆ ಕೊರತೆಯಾಗಿದ್ದರೆ ಮಾತ್ರ ಭಯ ಇರುತ್ತದೆ. ಈಗ ಪರೀಕ್ಷೆ ತಯಾರಿ ಮಾದರಿಗಳು ಬದಲಾಗಿದೆ. ಆನ್ ಲೈನ್ ವೇದಿಕೆಗಳ ಮೂಲಕವೂ ತಯಾರಿ  ನಡೆಸಬಹುದು. ಪರೀಕ್ಷೆಯಿಂದ ನಿಮ್ಮ ಸಾಮರ್ಥ್ಯ ಹೆಚ್ಚುತ್ತೆ ಎಂದು ಸಲಹೆ ನೀಡಿದರು.

‘ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಭಯಭೀತ ವಾತಾವರಣದಿಂದ ದೂರವಿರಬೇಕೆಂದು ನಾನು ಬಯಸುತ್ತೇನೆ. ‘ಜ್ಞಾನವನ್ನು ಪಡೆಯಲು ಆನ್‌ಲೈನ್ ಶಿಕ್ಷಣ ಸಹಕಾರಿ ಆದರೆ, ಆಫ್‌ ಲೈನ್ ಶಿಕ್ಷಣವು ಆ ಜ್ಞಾನವನ್ನು ಉಳಿಸಿಕೊಳ್ಳಲು ಮತ್ತು ಅದನ್ನು ಪ್ರಾಯೋಗಿಕವಾಗಿ ಅನ್ವಯಿಸಲು ಉಪಯೋಗವಾಗುತ್ತದೆ’ ಎಂದು ಪ್ರಧಾನಿ ಮೋದಿ ಕಿವಿಮಾತು ಹೇಳಿದರು.

‘ಆಫ್‌ಲೈನ್‌ ನಲ್ಲಿ ಏನಾಗುತ್ತದೆಯೋ ಅದೇ ಆನ್‌ ಲೈನ್‌ ನಲ್ಲೂ ನಡೆಯುತ್ತದೆ. ನಮಗೆ ಕಲಿಕೆಯ ಮಾಧ್ಯಮವು ಸಮಸ್ಯೆಯಾಗಬಾರದು. ನಮ್ಮ ಮನಸ್ಸು ವಿಷಯದೊಳಗೆ ಮುಳುಗಿದರೆ, ಅದು ಯಾವುದೇ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ ಎಂದರು.

Key words: pariksha pe charcha-PM Modi- Narendra Modi -children