ಪರೇಶ್ ಮೆಸ್ತಾ ಹತ್ಯೆ ಪ್ರಕರಣ: ಸಿಬಿಐ ತನಿಖಾ ವರದಿ ಬಗ್ಗೆ ಮಾಹಿತಿಯಿಲ್ಲ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ.

Promotion

ಮೈಸೂರು,ಅಕ್ಟೋಬರ್.4,2022(www.justkannada.in): ಪರೇಶ್ ಮೆಸ್ತಾ ಹತ್ಯೆ ಪ್ರಕರಣ ಸಂಬಂಧ ಪರೇಶ್ ಮೆಸ್ತಾ ಸಾವಿನ‌ ಕುರಿತು ಸಿಬಿಐ ನೀಡಿರುವ ತನಿಖಾ ವರದಿ ಬಗ್ಗೆ ಮಾಹಿತಿಯಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಓರ್ವ ಯುವಕ ಆಕಸ್ಮಿಕವಾಗಿ ಸಾವನ್ನಪ್ಪಲು ಸಾಧ್ಯವಿಲ್ಲ, ಇದನ್ನು ನಂಬಲಾಗುವುದಿಲ್ಲ. ಸಿಬಿಐ ಯಾವ ರೀತಿ ತನಿಖೆ ಮಾಡಿದೆಯೋ ಗೊತ್ತಿಲ್ಲ. ಈ ಬಗ್ಗೆ ಪರಿಶೀಲನೆ ಮಾಡಿದ ಬಳಿಕ ಮಾತನಾಡುತ್ತೇನೆ ಎಂದರು.

Key words: Paresh Mesta-murder- case- Union Minister -Shobha Karandlaje-mysore