ಮತ್ತೆ ಕುತಂತ್ರ ಬುದ್ಧಿ ತೋರಿದ ಪಾಕ್: ಕದ್ದುಮುಚ್ಚಿ ಉಗ್ರ ಮಸೂದ್ ಅಜರ್ ಬಿಡುಗಡೆ…

Promotion

ನವದೆಹಲಿ,ಸೆ,9,2019(www.justkannada.in): ಉಗ್ರ ಮಸೂದ್ ಅಜರ್ ನನ್ನ ಕಸ್ಟಡಿಯಿಂದ ಕದ್ದುಮುಚ್ಚಿ ಬಿಡುಗಡೆ ಮಾಡುವ ಮೂಲಕ  ಪಾಕಿಸ್ತಾನ ಮತ್ತೆ ತನ್ನ ಕುತಂತ್ರ ಬುದ್ಧಿಯನ್ನ ತೋರಿದೆ.

ಭಾರತದ ವಿರುದ್ದ ಉಗ್ರ ಚಟುವಟಿಕೆಗೆ ಭಾರಿ ಸಂಚು ರೂಪಿಸುತ್ತಿದ್ದು, ಇದಕ್ಕಾಗಿ ಜಾಗತಿಕ ಉಗ್ರ ಹಣೆಪಟ್ಟಿಯ ಜೆಇಎಂ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ನನ್ನು ರಹಸ್ಯವಾಗಿ ಬಿಡುಗಡೆ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಳೆದ ಎರಡು ತಿಂಗಳ ಹಿಂದೆ ಅಂತರಾಷ್ಟ್ರೀಯ ಒತ್ತಡಕ್ಕೆ ಮಣಿದು ಉಗ್ರರ ವಿರುದ್ದ ಕ್ರಮ ಎಂದು ಪಾಕಿಸ್ತಾನ ಮಸೂದ್ ಅಜರ್ ನನ್ನ ಬಂಧಿಸಿತ್ತು.

ಇದೀಗ ಗಡಿಯಲ್ಲಿ ಉಗ್ರ ಚಟುವಟಿಕೆಗೆ ಉತ್ತೇಜನ ನೀಡುವ ಸಲುವಾಗಿ ಉಗ್ರ ಮಸೂದ್ ಅಜರ್ ನನ್ನ ಪಾಕಿಸ್ತಾನ ಗುಪ್ತವಾಗಿ ಬಿಡುಗಡೆ ಮಾಡಿದೆ ಎನ್ನಲಾಗುತ್ತಿದೆ. ಇನ್ನ ಲಷ್ಕರ್ ಉಗ್ರರಿಂದ ಭಾರತೀಯ ಸೇನೆ ಮೇಲೆ ದಾಳಿ ನಡೆಸಲು ಸಂಚು ರೂಪಿಸುವ ಸಾಧ್ಯತೆ ಇದೆ.

Key words:  pakistan- Release –terrorist-Masood Azar.