ಟಿ-20 ವಿಶ್ವಕಪ್ ಕ್ರಿಕೆಟ್’ಗೆ ಪಾಕಿಸ್ತಾನ ತಂಡ ಪ್ರಕಟ ಬೆನ್ನಲ್ಲೆ ರಾಜೀನಾಮೆ ನೀಡಿದ ಕೋಚ್’ಗಳು

Promotion

ಬೆಂಗಳೂರು, ಸೆಪ್ಟೆಂಬರ್ 07, 2021 (www.justkannada.in): ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ಪಾಕಿಸ್ತಾನ ತಂಡ ಪ್ರಕಟಿಸಲಾಗಿದೆ.

ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗೂ ಮುನ್ನ ಪಾಕಿಸ್ತಾನ ಪ್ರವಾಸಿ ನ್ಯೂಜಿಲ್ಯಾಂಡ್‌ ಮತ್ತು ಇಂಗ್ಲೆಂಡ್‌ ವಿರುದ್ಧ ಒಟ್ಟು 7 ಪಂದ್ಯಗಳನ್ನಾಡಲಿದೆ.

ಫ‌ಖಾರ್‌ ಜಮಾನ್‌ ಮತ್ತು ಸರ್ಫರಾಜ್‌ ಅಹ್ಮದ್‌ ಗೆ ಕೋಕ್ ಕೊಟ್ಟಿರುವ ಪಿಸಿಬಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಆಸಿಫ್ ಅಲಿ ಮತ್ತು ಖುಷ್‌ದಿಲ್‌ ಶಾಗೆ ಅವಕಾಶ ಮಾಡಿಕೊಟ್ಟಿದೆ.

ಪಾಕಿಸ್ತಾನ ಟಿ20 ತಂಡ: ಬಾಬರ್‌ ಆಜಂ (ನಾಯಕ), ಶದಾಬ್‌ ಖಾನ್‌ (ಉಪನಾಯಕ), ಆಸಿಫ್ ಅಲಿ, ಆಜಂ ಖಾನ್‌, ಹ್ಯಾರಿಸ್‌ ರವೂಫ್, ಹಸನ್‌ ಅಲಿ, ಇಮಾದ್‌ ವಾಸಿಮ್‌, ಖುಷ್‌ದಿಲ್‌ ಶಾ, ಮೊಹಮ್ಮದ್‌ ಹಫೀಜ್‌, ಮೊಹಮ್ಮದ್‌ ಹಸ್ನೇನ್‌, ಮೊಹಮ್ಮದ್‌ ನವಾಜ್‌, ಮೊಹಮ್ಮದ್‌ ರಿಜ್ವಾನ್‌, ಮೊಹಮ್ಮದ್‌ ವಾಸಿಮ್‌ ಜೂ., ಶಹೀನ್‌ ಶಾ ಅಫ್ರಿದಿ, ಶೋಯಿಬ್‌ ಮಕ್ಸೂದ್‌.

ಕೋಚ್ ರಾಜೀನಾಮೆ: ಪಾಕಿಸ್ತಾನದ ಟಿ20 ತಂಡ ಪ್ರಕಟಗೊಂಡ ಬೆನ್ನಲ್ಲೇ ತಂಡದ ಪ್ರಧಾನ ಕೋಚ್‌ ಮಿಸ್ಬಾ ಉಲ್‌ ಹಕ್‌ ಮತ್ತು ಬೌಲಿಂಗ್‌ ಕೋಚ್‌ ವಕಾರ್‌ ಯೂನಿಸ್‌ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸದ್ಯಕ್ಕೆ ಮಾಜಿ ಕ್ರಿಕೆಟಿಗರಾದ ಸಕ್ಲೇನ್‌ ಮುಷ್ತಾಕ್‌ ಮತ್ತು ಅಬ್ದುಲ್‌ ರಜಾಕ್‌ ಈ ಹುದ್ದೆ ನಿಭಾಯಿಸಲಿದ್ದಾರೆ ಎಂದು ಪಿಸಿಬಿ ತಿಳಿಸಿದೆ.