ಪದ್ಮಶ್ರೀ ಪ್ರಶಸ್ತಿ ಪಡೆದ ಕೆ.ಎಸ್. ಜಯಲಕ್ಷ್ಮಿ ಅವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ ಎಸ್.ಎ ರಾಮದಾಸ್   

kannada t-shirts

ಮೈಸೂರು,ನವೆಂಬರ್,8,2021(www.justkannada.in):  ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಮೈಸೂರಿನ ‘ಸುಧರ್ಮ’ಸಂಸ್ಕೃತ  ಪತ್ರಿಕೆಯ  ಕೆ.ಎಸ್. ಜಯಲಕ್ಷ್ಮಿ ಅವರಿಗೆ  ಶಾಸಕ ಎಸ್.ಎ ರಾಮದಾಸ್ ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಶಾಸಕ ಎಸ್.ಎ ರಾಮದಾಸ್, ಸುಧರ್ಮ’ಸಂಸ್ಕೃತ  ಪತ್ರಿಕೆಯ  ಕೆ.ಎಸ್. ಜಯಲಕ್ಷ್ಮಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ಮೈಸೂರಿಗೆ ಹಾಗೂ ಕರ್ನಾಟಕಕ್ಕೆ ಹೆಮ್ಮೆಯ ವಿಷಯ. 2020 ನೆ ಸಾಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ದಿವಂಗತ ಸಂಪತ್ ಕುಮಾರ್ ಮತ್ತು ಅವರ ಪತ್ನಿ ಜಯಲಕ್ಷ್ಮೀ ಅವರಿಗೆ ಪದ್ಮಶ್ರೀ ಪುರಸ್ಕಾರವನ್ನು ನೀಡುವ ಮೂಲಕ ಕಳೆದ ಮೂರು ದಶಕಗಳಿಂದ ಈ ದಂಪತಿ ನಡೆಸಿಕೊಂಡು ಬರುತ್ತಿದ್ದ ತಪಸ್ಸಿನಂಥ ಕಾರ್ಯವನ್ನು ಗುರುತಿಸಿತ್ತು, ಜನಸಾಮಾನ್ಯರು ಇವರ ಪ್ರಯತ್ನದ ಬಗ್ಗೆ ಅರಿವು-ಆಸಕ್ತಿ ಮೂಡಿಸಿಕೊಳ್ಳುವುದಕ್ಕೆ ಇಂಬು ಕೊಟ್ಟಿತ್ತು ಎಂದರು

1970ರಲ್ಲಿ ವರದರಾಜ ಅಯ್ಯಂಗಾರ್ ಅವರು ಪ್ರಾರಂಭಿಸಿದ್ದ ಪತ್ರಿಕೆ ಸುಧರ್ಮ. ಸಂಸ್ಕೃತ ಎಂದರೆ ಕೇವಲ ವಿದ್ವಾಂಸರಿಗೆ ಎಂಬ ಗ್ರಹಿಕೆಯನ್ನು ಬದಲಾಯಿಸುವುದಕ್ಕೆ, ದೈನಂದಿನ ಆಗುಹೋಗುಗಳೂ ಸಂಸ್ಕೃತದಲ್ಲಿ ವರದಿಯಾಗಿ ಅವನ್ನು ಜನ ಓದುವಂತಾಗಲಿ ಎಂಬ ಉದಾತ್ತ ಧ್ಯೇಯದಿಂದ ಪ್ರಾರಂಭಿಸಿದ್ದ ಪತ್ರಿಕೆ ಅದು.

1990ರಲ್ಲಿ ವರದರಾಜ ಅಯ್ಯಂಗಾರ್ ಅವರ ಮರಣಾನಂತರ ಸಂಪತ್ ಕುಮಾರ್ ದಂಪತಿ ಅದನ್ನು ಮುಂದುವರಿಸಿಕೊಂಡು ಬಂದರು. ನಾಲ್ಕು ಪುಟಗಳ ಪತ್ರಿಕೆಯಲ್ಲಿ ದಿನದ ಮುಖ್ಯ ವಿದ್ಯಮಾನ, ಶೈಕ್ಷಣಿಕ ಕೋರ್ಸುಗಳ ಕುರಿತ ಮಾಹಿತಿ, ಕ್ರೀಡೆ ಇತ್ಯಾದಿ ಸಂಗತಿಗಳ ಕುರಿತ ಬರಹಗಳೂ ಪ್ರಕಟವಾಗುತ್ತವೆ.

ಸಂಪತ್ ಕುಮಾರ್ ಮತ್ತವರ ಪತ್ನಿ ಸುಧರ್ಮವನ್ನು ನಡೆಸಿಕೊಂಡು ಬರುತ್ತಿರುವುದೇ ಒಂದು ಶ್ರದ್ಧೆಯ ಕತೆ ಎಂದರೆ ತಪ್ಪಾಗಲಾರದು.  ಸುಧರ್ಮ ತನ್ನ ಅಂತರ್ಜಾಲ ಅವತರಣಿಕೆಯಲ್ಲಿ ಸುಮಾರು ಒಂದೂವರೆ ಲಕ್ಷ ಓದುಗರನ್ನು ಹೊಂದಿದೆ ಎಂಬುದೊಂದು ಅಂದಾಜು.

ಭಾರತದ ಹಲವು ಬಗೆಯ ಪರಂಪರೆ ಮತ್ತು ಜ್ಞಾನಗಳಿಗೆ ಕೀಲಿಕೈಯಂತಿರುವ ಸಂಸ್ಕೃತ ಭಾಷೆಯಲ್ಲಿ ನಿರಂತರ ದಿನಪತ್ರಿಕೆ ಪ್ರಕಟಣೆ ಮಾಡಿಕೊಂಡು ಬಹುದೊಡ್ಡ ಸಂಸ್ಕೃತಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ನಮ್ಮ ಕೆ.ಆರ್ ಕ್ಷೇತ್ರದ ನಿವಾಸಿಯಾಗಿದ್ದ ದಿವಂಗತ ಸಂಪತ್ ಕುಮಾರ್ ಹಾಗೂ  ಇವರಿಗೆ ಜೊತೆಯಲ್ಲಿ ಬೆಂಬಲಿಸುತ್ತಾ ಈಗಲೂ ಮುಂದುವರೆಸಿಕೊಂಡು ಹೋಗುತ್ತಿರುವ ಜಯಲಕ್ಷ್ಮಿ ಕೆ.ಎಸ್ ಅವರಿಗೆ ಪದ್ಮ ಪ್ರಶಸ್ತಿ ದೊರೆತಿರುವುದು ಮೈಸೂರಿಗರಿಗೆ ಹೆಮ್ಮೆಯ ವಿಷಯವೇ ಸರಿ, ಇವರಿಗೆ ಹೃತ್ಪೂರ್ವಕ ಅಭಿನಂದನೆಗಳು. ರಾಜ್ಯ ಸರ್ಕಾರದಿಂದ ಜಾಹಿರಾತುಗಳನ್ನು ನೀಡಲು ಹಾಗೂ ಜಾಹಿರಾತಿನ ಮೊತ್ತವನ್ನು ಹೆಚ್ಚಿಸಲು ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಮನವಿ ಸಲ್ಲಸಲಾಗುವುದು ಎಂದು ಶಾಸಕ ಎಸ್.ಎ ರಾಮದಾಸ್ ತಿಳಿಸಿದರು.

Key words: Padma Shri -Award-winning- Sudharma Sanskrit -KS Jayalakshmi- congratulated- MLA SA Ramdas

website developers in mysore