ಕನ್ನಡ ‘ಪದ’ಗಳೊಂದಿಗೆ ಆಟ ಆಡಿ ! ಮೊಬೈಲ್’ನಲ್ಲಿ ಆಡ್ತಾ ಭಾಷೆ ಕಲಿಯೋಣ…

ಮೈಸೂರು, ನವೆಂಬರ್ 20, 2020 (www.justknnada.in): ಕನ್ನಡ ಪದಗಳೊಂದಿಗೆ ಆಟ ಆಗಬಹುದು, ಆಡುತ್ತಾ ಆಡುತ್ತಾ ಭಾಷೆಯನ್ನೂ ಸರಳವಾಗಿ ಕಲಿಯಬಹುದು!

ಇಂತಹದೊಂದುಗೆ ಗೇಮಿಂಗ್ ಆ್ಯಪ್ ಅನ್ನು ಮೈಸೂರಿನ ಯುವಕರ ತಂಡ ಪ್ಯಾನ್ ಆರ್ಬಿಟ್ ಅಭಿವೃದ್ಧಿ ಪಡಿಸಿದೆ. ಪದಗಳೊಂದಿಗೆ ಭಾಷೆ ಕಲಿಸುವ ಹೊಸ ಆಲೋಚನೆಯೊಂದಿಗೆ ‘ಪದ’ ಎಂಬ ಗೇಮಿಂಗ್ ಆ್ಯಪ್ ರೂಪಿಸಲಾಗಿದೆ. ಬೆಂಗಳೂರಿನಲ್ಲಿ ಸ್ಟಾರ್ಟ್‌ಅಪ್ ಸಂಸ್ಥೆಯೊಂದನ್ನು ಆರಂಭಿಸಿರುವ ಮೈಸೂರಿನ ಕಾಮೇಶ್ವರ್ ನಾಯಕ್ ನೇತೃತ್ವದ ತಂಡ ಈ ಗೇಮಿಂಗ್ ಆ್ಯಪ್ ರೂಪಿಸಿದೆ.

ಏನೀದು ಗೇಮಿಂಗ್ ಆ್ಯಪ್?: ಪ್ರಸ್ತುತ ಬಹುತೇಕರು ಹೆಚ್ಚಿನ ಸಮಯ ಕಳೆಯುವುದು ಮೊಬೈಲ್ ಜತೆ. ಗೇಮ್ ಜತೆಗೆ ಟೈಮ್‌ಪಾಸ್ ಮಾಡುವುದು ಯುವ ಸಮೂಹದ ಕಾಯಕ ! ಇದನ್ನೇ ಇಟ್ಟುಕೊಂಡು ಗೇಮಿಂಗ್ ಮೂಲಕವೇ ಪದಗಳೊಂದಿಗೆ ಆಟವಾಡುತ್ತಾ ಕನ್ನಡ ಕಲಿಸುವ ಆಲೋಚನೆಯೊಂದಿಗೆ ಈ ಆ್ಯಪ್ ರೂಪಿಸಲಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ‘ಪದ’- ಕನ್ನಡ ವರ್ಡ್ ಸರ್ಚ್ ಗೇಮ್ ಗೇಮಿಂಗ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು (ಡೌನ್ಲೋಡ್ ಮಾಡಲು ಈ ಲಿಂಗ್ ಬಳಸಿ ( www.panorbit.in/pada ) ಅಥವಾ https://play.google.com/store/apps/details?id=in.panorbit.kannadakali.pada ಆರಂಭದಲ್ಲಿ ನಿಮ್ಮ ಹೆಸರು ಸೇರಿದಂತೆ ಈ ಮೇಲ್ ವಿಳಾಸ ಸೇರಿಸಿ ಲಾಗಿನ್ ಆಗಬೇಕು. ಬಳಿಕ ನಾನಾ ಹಂತಗಳಲ್ಲಿ ಪದ ಜೋಡಿಸುವ ಮೂಲಕ ಆಡುತ್ತಲೇ ಕನ್ನಡ ಕಲಿಯಬಹುದಾಗಿದೆ. ವಿಶೇಷ ಎಂದರೆ ಪದಗಳ ಗೇಮ್‌ನಲ್ಲಿ ನಾನಾ ಹಂತಗಳನ್ನು ದಾಟುತ್ತಿದ್ದಂತೆ ವಿಶೇಷ ರಿವಾರ್ಡ್‌ಗಳು ನಿಮ್ಮ ಜೇಬು ಸೇರುತ್ತವೆ !

ಭಾಷೆ ಕಲಿಸುವ ವಿಭಿನ್ನ ಬಗೆ: ಕನ್ನಡ ಕಲಿಸಲು ಸಾಕಷ್ಟು ಆ್ಯಪ್, ವೆಬ್‌ತಾಣಗಳಿವೆ. ಆದರೆ ಆಸಕ್ತಿದಾಯವಾಗಿ ಭಾಷೆ ಬಾರದವರಿಗೆ ಕನ್ನಡ ಕಲಿಸಬೇಕು. ಇದಕ್ಕಾಗಿ ಏನಾದರೂ ಮಾಡ್ಬೇಕು ಎಂದು ಯೋಚಿಸುತ್ತಿದ್ದಾಗ ಹೊಳೆದಿದ್ದೆ ಈ ಗೇಮಿಂಗ್ ಆ್ಯಪ್. ತಮ್ಮ ತಂಡದಲ್ಲಿರುವ ಕನ್ನಡದ ಯುವಕರೆಲ್ಲ ಈ ಆ್ಯಪ್ ರೂಪಿಸಿದ್ದೇವೆ. ಈ ಮೂಲಕ ಒಂದಷ್ಟು ಮಂದಿ ಕನ್ನಡ ಕಲಿತರೆ ನಮಗೂ ಖುಷಿ’’ ಎನ್ನುತ್ತಾರೆ ಆ್ಯಪ್ ರೂಪಿಸಿರುವ ಕಾಮೇಶ್ವರ್ ನಾಯಕ್.

ಪದ ಜೋಡಣೆ ಕಲಿ: ಪದ ಗೇಮ್‌ನಲ್ಲಿ ಸದ್ಯ ೪೮ ಹಂತಗಳನ್ನು ರೂಪಿಸಲಾಗಿದೆ. ಮೊದಲ ಹಂತದಲ್ಲಿ ಎರಡರಿಂದ ಮೂರು ಅಕ್ಷರಗಳ ಸರಳ ಪದಗಳು, ನಂತರ ಅದಕ್ಕಿಂತ ಒಂದಷ್ಟು ಕಠಿಣ ಪದಗಳನ್ನು ಅಳವಡಿಸಲಾಗಿದೆ. ನಾನಾ ಹಂತಗಳಿಗೆ ತಕ್ಕಂತೆ ಸಮಯಾವಕಾಶ ನೀಡಲಾಗಿದೆ. ಈ ಕಾಲಮಿತಿಯೊಳಗೆ ಪದಗಳನ್ನು ಜೋಡಿಸಿ ಮುಂದಿನ ಹಂತಕ್ಕೆ ಹೋಗಬಹುದಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಮತ್ತಷ್ಟು ಹಂತಗಳನ್ನು ರೂಪಿಸುವ ಹಾಗೂ ಪದಗಳ ಅರ್ಥವನ್ನು ಸೇರಿಸುವ ಜತೆಗೆ ಮಲ್ಟಿ ಪ್ಲೇಯರ್ಸ್‌ (ಬಹು ಆಟಗಾರರು) ಒಟ್ಟಿಗೆ ಆಟವಾಡುವಂತೆ ಆ್ಯಪ್ ಅಭಿವೃದ್ಧಿ ಪಡಿಸಲಾಗುತ್ತಿದೆ.

ಪ್ಯಾನ್’ಆರ್ಬಿಟ್’ನ ಕಾಮೇಶ್ವರ್ ನಾಯಕ್

ಬೆಂಗಳೂರಿನಲ್ಲಿರುವ ಬಹುತೇಕರಿಗೆ ಕನ್ನಡ ಬರಲ್ಲ. ಕನ್ನಡ ಅಂದ್ರೆ ಕನ್ನಡ್ ಅಂತಾರೆ! ಕಲಿಯಲು ಆಸಕ್ತಿ ಇದ್ದವರಿಗೆ ಆನ್‌ಲೈನ್‌ನಲ್ಲಿ ಭಾಷೆ ಕಲಿಸಲು ಹಲವಾರು ಆ್ಯಪ್‌ಗಳಿವೆ. ಆಸಕ್ತಿ ಮೂಡಿಸಿ ಕಲಿಯುವಂತೆ ಮಾಡುವ ವಿಧಾನಗಳಿರಲಿಲ್ಲ. ಆಟವಾಡುತ್ತಲೇ ಭಾಷೆ ಕಲಿಯಬಹುದು ಅಂದ್ರೆ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಬಹುದು. ಹೀಗಾಗಿ ಕನ್ನಡ ಪದಗಳೊಂದಿಗೆ ಆಟವಾಡುತ್ತಾ ಇರುವ ಪದ ಆ್ಯಪ್ ರೂಪಿಸಿದ್ದೇವೆ ಎನ್ನುತ್ತಾರೆ ಪ್ಯಾನ್ ಆರ್ಬಿಟ್ ಸಂಸ್ಥಾಪಕ ಕಾಮೇಶ್ವರ್ ನಾಯಕ್.