ಆಕ್ಸಿಜನ್ ಹಂಚಿಕೆ: ಧನ್ಯವಾದ ಹೇಳಬೇಕಿರುವುದು ಸುಪ್ರೀಂಕೋರ್ಟ್, ಹೈಕೋರ್ಟ್ ಗೆ ಹೊರತು ಬಿಜೆಪಿಯವರಿಗಲ್ಲ-ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟಾಂಗ್…

ಮೈಸೂರು,ಮೇ,12,2021(www.justkannada.in): ಟಾಸ್ಕ್ ಫೋರ್ಸ್ ನ ಆದೇಶದಂತೆ ಇಡೀ ದೇಶದಲ್ಲಿ ಅಗತ್ಯಕ್ಕೆ ಅನುಗುಣವಾಗಿ  ವಿವಿಧ ರಾಜ್ಯಗಳಿಗೆ ಆಕ್ಸಿಜನ್ ಹಂಚಿಕೆಯಾಗುತ್ತಿದ್ದು, ಅಂತೆಯೇ ಮೈಸೂರಿಗೂ ಆಕ್ಸಿಜನ್ ಕಂಟೇನರ್ ಬಂದಿದೆ. ಹೀಗಾಗಿ ಮೈಸೂರಿಗರು ಮತ್ತು ರಾಜ್ಯದ ಜನತೆ ಧನ್ಯವಾದ ಹೇಳಬೇಕಾಗಿರುವುದು ಸುಪ್ರೀಂಕೋರ್ಟ್ ಮತ್ತು ಹೈಕೊರ್ಟ್ ಮುಖ್ಯನ್ಯಾಯಾಧೀಶರಿಗೆ ಹೊರತು ಬಿಜೆಪಿಯವರಿಗಲ್ಲ ಎಂದು ಸಂಸದ ಪ್ರತಾಪ್ ಸಿಂಹರಿಗೆ  ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟಾಂಗ್ ನೀಡಿದರು.jk

ಈ ಕುರಿತು ‘ಜಸ್ಟ್ ಕನ್ನಡ  ಡಾಟ್ ಇನ್’ ಜತೆ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಚಾಮರಾಜನಗರ ಆಸ್ಪತ್ರೆಯಲ್ಲಿ 24 ರೋಗಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 5 ದಿನಗಳ ಹಿಂದೆ ಹೈಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತು. ಈ ಸಂಬಂಧ ಸಂಪೂರ್ಣ ಮಾಹಿತಿ ತರಿಸಿಕೊಂಡ ಹೈಕೋರ್ಟ್ ಪರಿಶೀಲಿಸಿ ನಂತರ,  ಕರ್ನಾಟಕದಲ್ಲಿ ಆಕ್ಸಿಜನ್ ಕೊರತೆ ಇದೆ. ಹೀಗಾಗಿ ಕೇಂದ್ರ ಸರ್ಕಾರ 1200 ಮೆಟ್ರಿಕ್ ಟನ್ ಆಕ್ಸಿಜನ್ ಕಳುಹಿಸಬೇಕು ಎಂದು ಆದೇಶಿಸಿತು.

ಆದರೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಕೋರ್ಟ್ ಮೊರೆ ಹೋಗಿತು. ಈ ವೇಳೆ ಸುಪ್ರೀಂಕೋರ್ಟ್  ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದು  ಹೈಕೋರ್ಟ್ ನಿರ್ದೇಶನ ಪಾಲಿಸುವಂತೆ  ಕೇಂದ್ರ ಸರ್ಕಾರಕ್ಕೆ ಸೂಚಿಸಿತು. ಜತೆಗೆ ಸುಪ್ರೀಂಕೋರ್ಟ್  12 ಜನರ ಟಾಸ್ಕ್ ಫೋರ್ಸ್ ರಚಿಸಿದ್ದು ಈ ಫಲವಾಗಿ ಇಂದು ರಾಜ್ಯಕ್ಕೆ 1200 ಎಂಟಿ ಆಕ್ಸಿಜನ್ ದೊರೆಯುತ್ತಿದೆ ಎಂದು ಎಂ.ಲಕ್ಷ್ಮಣ್ ವಿವರಿಸಿದರು.

ಹಾಗೆಯೇ ಕರ್ನಾಟಕ ರಾಜ್ಯದಲ್ಲಿ 7 ಕಂಪನಿಗಳು ಸುಮಾರು 2445 ಮೆಟ್ರಿಕ್ ಟನ್ ಆಕ್ಸಿಜನ್ ತಯಾರಿಸುತ್ತಿದ್ದರೂ ಇದರ ಹಂಚಿಕೆ ಕೇಂದ್ರದ ಒಡೆತನದಲ್ಲಿದ್ದುಕೊಂಡು ರಾಜ್ಯಕ್ಕೆ ಕೇವಲ 865 ಮೆಟ್ರಿಕ್ ಟನ್ ನಷ್ಟು ಮಾತ್ರ ಹಂಚಿಕೆ ಮಾಡಿತ್ತು. ಆದರೆ ರಾಜ್ಯಕ್ಕೆ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನಿಂದ ನ್ಯಾಯ ಸಿಕ್ಕಿದೆ.

ಹೀಗಾಗಿ ರಾಜ್ಯದ ಜನತೆ ಮತ್ತು ಮೈಸೂರಿಗರು ಏನಾದರು ಧನ್ಯವಾದಗಳನ್ನು ಹೇಳಬೇಕೆಂದರೆ ಪ್ರಮುಖವಾಗಿ ಹೈಕೋರ್ಟ್ ಮುಖ್ಯನ್ಯಾಯಾಧೀಶರಿಗೆ, ಸುಪ್ರೀಂಕೋರ್ಟ್ ಗೆ ಮತ್ತು ಟಾಸ್ಕ್ ಫೋರ್ಸ್ ನವರಿಗೆ ಹೇಳಬೇಕೇ ಹೊರತು ಬಿಜೆಪಿಯವರಿಗಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದರು.oxygen-thank-supreme-court-high-court-not-bjp-kpcc-spokesperson-m-laxman

ಮೈಸೂರಿಗೆ 20 ಮೆಟ್ರಿಕ್ ಟನ್ ಆಕ್ಸಿಜನ್ ಆಗಮಿಸಿದ ಹಿನ್ನೆಲೆಯಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಹೇಳಿದ್ದರು.

Key words: Oxygen-thank-Supreme Court- High Court – not – BJP-kpcc spokesperson- M.Laxman