ಮಾಲೀಕರು ನೋ ಮಾಸ್ಕ್ ನೋ ಬ್ಯುಸಿನೆಸ್: ಎಫ್ ಕೆಸಿಸಿಐ, ಚೇಂಬರ್ ಆಫ್ ಕಾಮರ್ಸ್

ಮೈಸೂರು, ಮೇ 18, 2020 (www.justkannada.in): ವ್ಯಾಪಾರಸ್ಥರು ಮತ್ತು ಉದ್ದಿಮೆದಾರರು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಎಫ್ ಕೆಸಿಸಿಐ, ಚೇಂಬರ್ ಆಫ್ ಕಾಮರ್ಸ್ ನಿಂದ ಮಾಹಿತಿ ನೀಡಲಾಗಿದೆ.

ಸರ್ಕಾರದ ಆದೇಶದ ಪ್ರಕಾರ ಎಲ್ಲ ಮಾಲೀಕರು ಮತ್ತು ನೌಕರರು ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು. ಎಲ್ಲಾ ಅಂಗಡಿ ಮಾಲೀಕರು ನೋ ಮಾಸ್ಕ್ ನೋ ಬ್ಯುಸಿನೆಸ್ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು. ಮಾಸ್ಕ್ ಧರಿಸದ ಗ್ರಾಹಕರಿಗೆ ಪ್ರವೇಶ ನಿರ್ಬಂಧಿಸಬೇಕು. ಎಲ್ಲಾ ವ್ಯಾಪಾರ ಮಳಿಗೆಗಳಲ್ಲಿ ಸಾರ್ವಜನಿಕ ಅಂತರ ಕಾಯ್ದುಕೊಂಡು ವ್ಯವಹರಿಸಬೇಕು ಎಂದು ಎಫ್ ಕೆಸಿಸಿಐ ಮಾಜಿ ಅಧ್ಯಕ್ಷ ಸುಧಾಕರ ಶೆಟ್ಟಿಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಗ್ರಾಹಕರನ್ನು ಥರ್ಮಲ್ ಸ್ಕ್ರೀನಿಂಗ್ ಬಳಿಕವೇ ಒಳ ಬಿಡಬೇಕು. ಗ್ರಾಹಕರಿಗೆ ಒಳಪ್ರವೇಶಿಸುವ ಮುನ್ನ ಸ್ಯಾನಿಟೈಜರ್ ನಿಂದ ಕೈ ಸ್ವಚ್ಛಗೊಳಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಮಾಸ್ಕ್ ಧರಿಸದ ಗ್ರಾಹಕರ ಜೊತೆ ಯಾವುದೇ ಕಾರಣಕ್ಕೂ ವ್ಯವಹರಿಸಕೂಡದು. ನಿಮ್ಮ ಅಂಗಡಿಗಳಲ್ಲಿ ಬಳಸಿದ ಮಾಸ್ಕ್ ಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಸೂಕ್ತ ರೀತಿಯಲ್ಲಿ ವಿಲೇವಾರಿ. ಈ ಮೇಲಿನ ಎಲ್ಲಾ ನಿಯಮಗಳನ್ನು ಅನುಸರಿಸುವಂತೆ ಸುಧಾಕರ ಶೆಟ್ಟಿ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಎಮ್ ಸಿಸಿಐ ಅಧ್ಯಕ್ಷ ಸತೀಶ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಭಾಗಿಯಾಗಿದ್ದರು.