ದೇಶದಲ್ಲಿ ಒಂದೇ ದಿನ 2.58 ಲಕ್ಷ ಹೊಸ ಕೋವಿಡ್ ಪ್ರಕರಣಗಳು ಪತ್ತೆ.

Promotion

ನವದೆಹಲಿ,ಜನವರಿ,17,2022(www.justkannada.in):  ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲಾಗುವ ಕೋವಿಡ್ ಪ್ರಕರಣ ಸಂಖ್ಯೆ ಕೊಂಚ ಕಡಿಮೆಯಾಗಿದ್ದು, 2.58 ಲಕ್ಷ ಮಂದಿಗೆ ಹೊಸ  ಕೊರೋನಾ ಸೋಂಕು ತಗುಲಿದೆ.

ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 2,58,098 ಹೊಸ ಕೊವಿಡ್ 19 ಕೇಸ್​ಗಳು ದಾಖಲಾಗಿವೆ. ಹಾಗೆಯೇ ಇದೇ ಅವಧಿಯಲ್ಲಿ 385 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಸದ್ಯ ದೇಶದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.19.65ರಷ್ಟಿದೆ.

ಇನ್ನು ಒಂದು ದಿನದಲ್ಲಿ 1,51,740 ಮಂದಿ ಚೇತರಿಸಿಕೊಂಡಿದ್ದು, ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 16,56,341ಕ್ಕೆ ತಲುಪಿದೆ. ಒಟ್ಟಾರೆ ಕೊರೊನಾದಿಂದ ಚೇತರಿಕೆ ಕಂಡವರ ಸಂಖ್ಯೆ 3,52,37,461 ಆಗಿದ್ದು, ಚೇತರಿಕೆ ದರ ಶೇ.94.27 ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಒಂದೆಡೆ ಕೊವಿಡ್​ 19 ಕೇಸ್​ನಲ್ಲಿ ಇಳಿಕೆಯಾಗಿದ್ದರೆ, ಇನ್ನೊಂದೆಡೆ ಒಮಿಕ್ರಾನ್​ ಸೋಂಕಿತರ ಸಂಖ್ಯೆ ಹೆಚ್ಚಿದೆ. ಭಾನುವಾರ 7743 ಇದ್ದ ಒಮಿಕ್ರಾನ್​ ಸೋಂಕಿತರ ಸಂಖ್ಯೆ ಇಂದು 8209ಕ್ಕೆ ಏರಿದೆ. ಇದರಲ್ಲಿ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದ್ದು, 1738 ಮಂದಿ ಒಮಿಕ್ರಾನ್ ಸೋಂಕಿತರು ಇದ್ದಾರೆ. ಹಾಗೇ ಎರಡನೇ ಸ್ಥಾನದಲ್ಲಿರುವ ಪಶ್ಚಿಮ ಬಂಗಾಳದಲ್ಲಿ 1672 ಮತ್ತು ಮೂರನೇ ಸ್ಥಾನದಲ್ಲಿರುವ ರಾಜಸ್ಥಾನದಲ್ಲಿ 1276 ಸೋಂಕಿತರಿದ್ದಾರೆ.

Key words: Over -2.58 lakh -new -covid -cases

ENGLISH SUMMARY…

2.58 lakh new COVID cases reported in the country in the last 24 hours
New Delhi, January 17, 2022 (www.justkannada.in): The number of COVID cases reported across the country in the last 24 hours has reduced a little, 2.58 lakh new cases have been reported.
According to the information provided by the Union Health Ministry, about 2,58,098 new cases have been reported in the last 24 hours and 385 people lost their lives. The positivity rate in the country is 19.65%.
In the last 24 hours, 1,51,740 people have recovered from the pandemic and the total number of active cases are 16,56,341. The tally of the people who have recovered has reached 3,52,37,461 and the recovery rate is 94.27%.
While on the one hand, the number of new COVID cases has reduced a little bit, the number of Omicron cases has increased. The number of Omicron cases in the country on Sunday was 7743. Thus the tally has increased to 8209. While Maharashtra is in the first place with 1738 Omicron cases, West Bengal is in second place with 1672 cases, and Rajasthan is in third place with 1276 cases.
Keywords: COVID-19/ cases reduce/ Omicron cases increase